ಫೇಸ್‌ಬುಕ್ ಸ್ನೇಹಿತನಿಂದ ₹ 5 ಲಕ್ಷ ವಂಚನೆ
ಮೈಸೂರು: ಹುಣಸೂರು ಪಟ್ಟಣದ ಮಹಿಳೆಯೊಬ್ಬರಿಗೆ ‘ಫೇಸ್‌ಬುಕ್’ನಲ್ಲಿ ಪರಿಚಯನಾದ ನ್ಯೂಮಾನ್ ಎಂಬಾತ ಉಡುಗೊರೆ ಬಂದಿದ್ದು, ಅದರ ತೆರಿಗೆಗಾಗಿ ಹಣ ಬೇಕೆಂದು ₹ 5.30 ಲಕ್ಷದಷ್ಟು ಹಣವನ್ನು ಪಡೆದು ವಂಚಿಸಿದ್ದಾನೆ.
ಮೊದಲಿಗೆ ‘ಫೇಸ್‌ಬುಕ್’ನಲ್ಲಿ ಪರಿಚಯನಾದ ಈತ ಆಟವೊಂದರಲ್ಲಿ ಉಡುಗೊರೆ ಬಂದಿದೆ ಎಂದು ನಂಬಿಸಿದ. ಇದನ್ನು ನೀಡಲು ₹ 5.30 ಲಕ್ಷ ಹಣ ಬೇಕು ಎಂದು ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆ ಚಿನ್ನದ ನಾಣ್ಯವೆಂದು ನಂಬಿಸಿ ₹ 2.50 ಲಕ್ಷ ವಂಚನೆ
ಮೈಸೂರು: ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಮೂಡಲಕೊಪ್ಪಲು ಗ್ರಾಮದ ಶಿವಕುಮಾರ್ ಅವರಿಗೆ ದಾವಣಗೆರೆಯ ದುಗಪ್ಪ ಹಾಗೂ ಶಿಕಾರಿಪುರದ ರಂಗಪ್ಪ ಎಂಬ ಇಬ್ಬರು ಹಳೆಯ ಕಾಲದ ಚಿನ್ನದ ನಾಣ್ಯವೆಂದು ನಂಬಿಸಿ ನಕಲಿ ಚಿನ್ನದ ನಾಣ್ಯ ಕೊಟ್ಟು ₹ 2.50 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.