ಮೈಸೂರು: ಅಕ್ಷಯ ಆಹಾರ ಫೌಂಡೇಷನ್ ವತಿಯಿಂದ ಇಲ್ಲಿನ ಕೆ.ಆರ್.ಆಸ್ಪತ್ರೆ ಮುಂಭಾಗ ಶನಿವಾರದಿಂದ ನಿತ್ಯ 2 ಸಾವಿರ ಮಂದಿಗೆ ಆಹಾರವನ್ನು ವಿತರಿಸಲಾಗುತ್ತಿದೆ.

ಫೌಂಡೇಷನ್ನಿನ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ‘ಅಕ್ಷಯ ಆಹಾರ ಜೋಳಿಗೆ’ ಮೂಲಕ ಎಚ್.ಆರ್.ರಾಜೇಂದ್ರ, ಎಂ.ಕೆ.ಶ್ವೇತಾ ಸೇರಿದಂತೆ 9 ಮಂದಿ ಇಲ್ಲಿ ನಿತ್ಯ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಸಂಬಂಧಿಕರಿಗೆ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವವರಿಗೆ, ರಸ್ತೆಬದಿಯಲ್ಲಿ ವಾಸಿಸುತ್ತಿರುವವರಿಗೆ ವಿತರಿಸುತ್ತಿದ್ದಾರೆ.

ಇದರ ಜತೆಗೆ, ಕುವೆಂಪುನಗರದ ಸುಮಾಸೋಪಾನ ಉದ್ಯಾನ, ಸಿದ್ದಾರ್ಥನಗರದ ಮೋಕ್ಷ ಮಾರ್ಗದಲ್ಲಿಯೂ ನಿರಾಶ್ರಿತರಿಗೆ, ರಸ್ತೆ ಬದಿ ವಾಸಿಸುವವರಿಗೆ ಆಹಾರ ನೀಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಫೌಂಡೇಷನ್ನಿನ ಎಚ್.ಆರ್.ರಾಜೇಂದ್ರ, ‘ಕಳೆದ ವರ್ಷವೂ ಲಾಕ್ಡೌನ್ ಸಮಯದಲ್ಲಿ ಇದೇ ಬಗೆಯಲ್ಲಿ ಸೇವಾ ಕಾರ್ಯ ಮಾಡಲಾಗಿತ್ತು. ಈಗ ಇಂಡಿ ಫುಡ್ಸ್, ಪ್ರಕಾಶ್ ಜ್ಯುಯೆಲ್ಲರಿ ಸೇರಿದಂತೆ ಇತರ ಸಂಸ್ಥೆಗಳು ಜತೆಯಾಗಿವೆ. ಆಹಾರದ ಅಗತ್ಯವಿದ್ದವರು ಮೊ: 9148987375 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.