ಗುರುವಾರ , ಮಾರ್ಚ್ 4, 2021
18 °C
ಗ್ರಂಥಾಲಯ ಮತ್ತು ಅತಿಥಿ ಗೃಹ ಸ್ಥಾಪನೆಗೆ ಒಲವು

ಗಾಂಧಿ ಭವನಕ್ಕೆ ಸಕಲ ನೆರವು– ಕುಲಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯಕ್ರಮಗಳು ಗಾಂಧಿ ಭವನದ ಮೂಲಕ ಆಗಬೇಕಿದೆ. ಒಂದು ಗ್ರಂಥಾಲಯ ಮತ್ತು ಅತಿಥಿ ಗೃಹ ಬೇಕಿದೆ. ಇದಕ್ಕೆ ಸರ್ಕಾರದ ನೆರವನ್ನು ಕೋರಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನದ ಅಂಗವಾಗಿ ಬುಧವಾರ ಗಾಂಧಿ ಭವನದಲ್ಲಿ ನಡೆದ ವಿಶ್ವ ಅಹಿಂಸಾ ದಿನದಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಸರ್ಕಾರ ನೆರವು ನೀಡದಿದ್ದರೆ, ಮೈಸೂರು ವಿ.ವಿ ವತಿಯಿಂದಲೇ ಕಾಮಗಾರಿ ಕೈಗೊಳ್ಳಲಾಗುವುದು. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

‘ದೇಶದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಇಲ್ಲದಂತಹ ಸಾಬರಮತಿ ಆಶ್ರಮದ ತದ್ರೂಪು ನಮ್ಮ ವಿವಿಯ ಗಾಂಧಿ ಭವನಲ್ಲಿರುವುದು ವಿಶೇಷ. ಇಲ್ಲಿ ಗಾಂಧಿ ವಿಚಾರಧಾರೆಗಳಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಕೆಲಸ ಆಗಬೇಕಿದೆ’ ಎಂದರು.

ನಾಡಿನ ಹಿರಿಯ ಗಾಂಧಿವಾದಿ ಚಾಮರಾಜನಗರದ ಸಿ.ಆರ್.ರಂಗಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಂಗಪಟ್ಟಣದ ಡಾ.ಬಿ.ಸಂಜಯ್ ಕುಮಾರ್, ವಿವಿ ಕುಲಸಚಿವ ಆರ್.ಶಿವಪ್ಪ, ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಖಜಾಂಚಿ ಎನ್.ಸಂತೋಷ್‍ಕುಮಾರ್, ಗಾಂಧಿಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್  ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವಿ.ವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರು ನಾಡಿನ ಸಾಹಿತಿಗಳು ಕಂಡಂತೆ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಕುರಿತು
ತಾವೇ ರಚಿಸಿರುವ ಕವನ ವಾಚಿಸಿದರು.

ಶ್ರೀರಂಗಪಟ್ಟಣದ ಡಾ.ಸುಜಯ್‍ಕುಮಾರ್, ಎನ್.ಸಂತೋಷ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ‘ಗಾಂಧಿ ಭಜನೆ’ಗಳನ್ನು ಹಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.