ಶನಿವಾರ, ಅಕ್ಟೋಬರ್ 31, 2020
20 °C

ಗೋಲ್ಡ್ ಬಾಂಡ್ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಂಚೆ ಇಲಾಖೆ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಆರಂಭಿಸಿದ್ದು, ಆಸಕ್ತರು ಅ.16ರೊಳಗೆ ಸಮೀಪದ ಅಂಚೆ ಕಚೇರಿ ಮೂಲಕ ‘ಸಾವರಿನ್ ಗೋಲ್ಡ್ ಬಾಂಡ್’ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಒಂದು ಗ್ರಾಂ ಚಿನ್ನದ ದರವನ್ನು ₹ 5,051ಕ್ಕೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆ.ಜಿ (ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಠ ಹೂಡಿಕೆಯಾಗಿರುತ್ತದೆ.

ಬಾಂಡ್ ಅವಧಿ 8 ವರ್ಷ. ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ಧಾರಣೆಯ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ 2.5ರಷ್ಟು ನಿಶ್ಚಿತ ಬಡ್ಡಿಯೂ ಲಭ್ಯ. (ಅರ್ಧವಾರ್ಷಿಕ –ವರ್ಷಕ್ಕೆ ಎರಡು ಬಾರಿ).

5, 6, ಮತ್ತು 7ನೇ ವರ್ಷಗಳಲ್ಲಿಯೂ ಸಹ ಈ ಯೋಜನೆಯಿಂದ ನಿರ್ಗಮಿಸುವ ಅವಕಾಶವಿರುತ್ತದೆ. ಜೊತೆಗೆ ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹದು.

ಮಾಹಿತಿಗೆ ಸಮೀಪದ ಅಂಚೆ ಕಚೇರಿ ಸಂಪರ್ಕಿಸಿ. 0821-2417308/2017307, 9845107947ಗೆ ಕರೆ ಮಾಡಿ ಎಂದು ಅಂಚೆ ಇಲಾಖೆಯ ಮೈಸೂರು ವಿಭಾಗದ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು