ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಭಾರಿ ಮಳೆ; ಧರೆಗುರುಳಿದ ಮರಗಳು

Last Updated 12 ನವೆಂಬರ್ 2021, 10:01 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ.

ಮಹಾತ್ಮಗಾಂಧಿ ಚೌಕದ ಸಮೀಪ ಆರ್‌ಆರ್‌ಆರ್‌ ಹೋಟೆಲ್ ಮುಂಭಾಗ ಬೃಹತ್ ಗಾತ್ರ ಮರ ಉರುಳಿ 4 ಕಾರುಗಳು ಜಖಂಗೊಂಡಿವೆ.

ಜಲದರ್ಶಿನಿ ಅತಿಥಿ ಗೃಹದ ಸಮೀಪ, ಗಾಯತ್ರಿಪುರಂ, ವಿಜಯನಗರ ರೈಲ್ವೆ ಬಡಾವಣೆ, ಇಟ್ಟಿಗೆಗೂಡಿನ ಭುವನೇಶ್ವರಿ ದೇವಸ್ಥಾನದ ಸಮೀಪ ಹಾಗೂ ಬೋಗಾದಿ ರಸ್ತೆಯಲ್ಲಿ ಮರಗಳು ಉರುಳಿವೆ.

ನಗರದಲ್ಲಿ 3.5 ಸೆಂ.ಮೀ ಮಳೆಯಾಗಿದ್ದು, ಶುಕ್ರವಾರ ಹೆಚ್ಚಿನ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ತಾಪಮಾನವೂ ಕಡಿಮೆಯಾಗಿದ್ದು, ಚಳಿಯ ವಾತಾವರಣ ಇದೆ.

ಮಳೆಯಿಂದಾಗಿ ಉರುಳಿರುವ ಮರಗಳು
ಮಳೆಯಿಂದಾಗಿ ಉರುಳಿರುವ ಮರಗಳು
ಭಾರಿ ಮಳೆಗೆ ಧರೆಗುರುಳಿದ ಭಾರಿ ಗಾತ್ರದ ಮರ
ಭಾರಿ ಮಳೆಗೆ ಧರೆಗುರುಳಿದ ಭಾರಿ ಗಾತ್ರದ ಮರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT