ಗುರುವಾರ , ಫೆಬ್ರವರಿ 20, 2020
27 °C

ಮೈಸೂರು| ಕಾಡುಪಾಪಗಳ ಮಾರಾಟ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಾಡುಪಾಪಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಸಂಚಾರ ದಳದ ಅಧಿಕಾರಿಗಳು ಮೂವರನ್ನು ಬಂಧಿಸಿ, 2 ಕಾಡುಪಾಪಗಳನ್ನು ರಕ್ಷಿಸಿದ್ದಾರೆ.

ಕಿರಣ್, ಮನೋಹರ್ ಹಾಗೂ ಸಿದ್ದರಾಜು ಬಂಧಿತರು. ಇವರು ತಿ.ನರಸೀಪುರ ಸಮೀಪದ ಫಾರ್ಮ್‌ಹೌಸ್‌ ಒಂದರಲ್ಲಿ ಕಾಡುಪಾಪಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಖರೀದಿದಾರರಂತೆ ನಟಿಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ವಾಮಾಚಾರ ಮಾಡುವಾಗ ಕಾಡುಪಾಪಗಳನ್ನು ಬಲಿ ಕೊಡಲಾಗುತ್ತದೆ. ಹೀಗಾಗಿ, ಇವುಗಳಿಗೆ ಕಾಳಸಂತೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಅರಣ್ಯ ಸಂಚಾರ ದಳದ ಡಿಸಿಎಫ್ ಪೂವಯ್ಯ, ಎಸಿಎಫ್ ಸುವರ್ಣಾ, ಸಿಬ್ಬಂದಿಯಾದ ಮೋಹನ್, ಸುಂದರ್, ಲಕ್ಷ್ಮೀಶ್, ಪ್ರಮೋದ, ಕೊಟ್ರೇಶನಾಯಕ, ಮಹಂತೇಶ್, ಸತೀಶ್, ಶರಣಪ್ಪ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು