ಬುಧವಾರ, ಸೆಪ್ಟೆಂಬರ್ 22, 2021
22 °C
ಆಷಾಢ ಶುಕ್ರವಾರಕ್ಕೆ ಬದಲಾಗಿ ಮಂಗಳವಾರವೇ ಬಂದ ಭಕ್ತರು

ಚಾಮುಂಡಿಬೆಟ್ಟದಲ್ಲಿ ಅಪಾರ ಜನಜಂಗುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊನೆಯ ಆಷಾಢ ಮಂಗಳವಾರ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು.

ಚಾಮುಂಡಿಬೆಟ್ಟ ಗ್ರಾಮದಲ್ಲಿ ಊರಿನಹಬ್ಬವೂ ಇದ್ದುದ್ದರಿಂದ ಜನಸಂದಣಿ ಅತ್ಯಧಿಕವಾಗಿತ್ತು. ಆಷಾಢ ಶುಕ್ರವಾರ ದರ್ಶನ ಇರುವುದಿಲ್ಲ ಎಂಬ ಕಾರಣಕ್ಕೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು ಕಂಡು ಬಂತು.

ಹಣ ನೀಡಿ ಟಿಕೆಟ್‌ ತೆಗೆದುಕೊಂಡವರೂ ಧರ್ಮ ದರ್ಶನದಂತೆ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇತ್ತು. ಧರ್ಮ ದರ್ಶನದ ಸಾಲು ಮತ್ತೂ ಹೆಚ್ಚಾಗಿತ್ತು. ಚಾಮುಂಡಿಬೆಟ್ಟಕ್ಕೆ ತೆರಳುವ ಬಸ್‌ಗಳೂ ಜನರಿಂದ ತುಂಬಿ ತುಳುಕುತ್ತಿದ್ದವು. ದ್ವಿಚಕ್ರ ವಾಹನಗಳು, ಕಾರುಗಳ ಸಂಚಾರ ಅಧಿಕವಾಗಿತ್ತು.

ದೇವಸ್ಥಾನದ ಆವರಣದಲ್ಲಿ, ಮಹಿಷಾಸುರ ಪ್ರತಿಮೆ ಮುಂಭಾಗ ಮಾಸ್ಕ್‌ ಧರಿಸದೇ ಸೆಲ್ಫೀ ತೆಗೆದುಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು. ಮಾಸ್ಕ್‌ನ್ನು ಮರೆತ ಅನೇಕ ಮಂದಿ ಇದ್ದರು. ಬಹುತೇಕ ಕಡೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು