ಗುರುವಾರ , ಫೆಬ್ರವರಿ 20, 2020
27 °C

ಪತ್ರಕರ್ತೆ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಸುದ್ದಿವಾಹಿನಿಯೊಂದರ ವರದಿಗಾರ್ತಿ ಶ್ರುತಿ ಹಾಗೂ ಕ್ಯಾಮೆರಾಮೆನ್ ರಾಮಕೃಷ್ಣ ಎಂಬುವರನ್ನು ಗುರುವಾರ ರಾತ್ರಿ 8 ಜನರ ತಂಡವೊಂದು ಥಳಿಸಿ ಕ್ಯಾಮೆರಾ ಒಡೆದು ಹಾಕಿದೆ.

‘ಇವರು ರೆಹಮತ್ ಮೊಹಲ್ಲಾದಲ್ಲಿ ಹುಣಸೂರು ನಗರಸಭೆ ಚುನಾವಣೆ ಸಂಬಂಧ ಸಮೀಕ್ಷೆ ನಡೆಸಲು ಮತದಾರರನ್ನು ಮಾತನಾಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಗರಸಭೆ ಮಾಜಿ ಸದಸ್ಯ ಮುಜೀಬ್ ಮತ್ತು ಮಕ್ಕಳಾದ ಬಷೀರ್ ಆಹಮ್ಮದ್, ಮತ್ತು ಹಸೀಬ್ ಆಹಮ್ಮದ್ ಸೇರಿದಂತೆ 8 ಜನರ ತಂಡ ಅಡ್ಡಿಪಡಿಸಿ, ಹಲ್ಲೆ ನಡೆಸಿದೆ. ಜತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಇವರನ್ನು ಕೂಡಲೇ ಬಂಧಿಸಲಾಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್ ಮಹೇಶ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)