ಶುಕ್ರವಾರ, ನವೆಂಬರ್ 15, 2019
27 °C

ಕಲಾಜಾಥಾದ ಝಲಕ್‌...

Published:
Updated:
Prajavani

ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ‘ಆದಿವಾಸಿ ಜನರ ಹಕ್ಕು ಘೋಷಣಾ ದಿನ’ದ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಕಲಾಜಾಥಾದಲ್ಲಿ ದೇಶದ ವಿವಿಧ ಬುಡಕಟ್ಟು ಜನರು ಭಾಗವಹಿಸಿದ್ದರು.

ದೇಶದ ವಿವಿಧ ಸಂಸ್ಕೃತಿಯ ಜನರು ತಮ್ಮ ಪೋಷಾಕು ಧರಿಸಿದ್ದರು.ಬಿಲ್ಲು, ಬಾಣ ಹಿಡಿದಿದ್ದ ಅವರು ಗಮನ ಸೆಳೆದರು. ತರಗಲೆ, ಸೊಪ್ಪು, ಕಚ್ಚೆ, ಪೇಟಾಗಳನ್ನು ಧರಿಸಿದ್ದ ಆದಿವಾಸಿಗಳು ಸೂಜಿಗಲ್ಲಿನಂತೆ ಸೆಳೆದರು.

ಅವರ ವೇಷಭೂಷಣ, ನೃತ್ಯದ ಭಂಗಿ ಹಾಗೂ ಸಂಭ್ರಮದ ಕ್ಷಣಗಳನ್ನು ಬಿ.ಆರ್‌.ಸವಿತಾ ಅವರು ಸೆರೆ ಹಿಡಿದಿದ್ದಾರೆ.

ಪ್ರತಿಕ್ರಿಯಿಸಿ (+)