ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೋ.ಚೆನ್ನಬಸಪ್ಪನವರ ಜನ್ಮಶತಮಾನೋತ್ಸವ 27ಕ್ಕೆ

Last Updated 23 ಜುಲೈ 2022, 7:48 IST
ಅಕ್ಷರ ಗಾತ್ರ

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಮೈಸೂರು ನಗರ, ಜಿಲ್ಲಾ ಘಟಕ ಹಾಗೂ ಕೋ.ಚೆನ್ನಬಸಪ್ಪನವರ ಜನ್ಮ ಶತಮಾನೋತ್ಸವ ಸಮಿತಿಯಿಂದ ಜುಲೈ 27ರಂದು ಬೆಳಿಗ್ಗೆ 11ಕ್ಕೆ ಕುವೆಂಪುನಗರದ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ‘ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಕೋ.ಚೆನ್ನಬಸಪ್ಪನವರ ಜನ್ಮಶತಮಾನೋತ್ಸವ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

‘ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಆಶಯ ಭಾಷಣ ಮಾಡುವರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ ಭೂತೆ ಅಧ್ಯಕ್ಷತೆ ವಹಿಸುವರು’ ಎಂದು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

‘ಪ್ರಗತಿಶೀಲ ಬರಹಗಾರರಾಗಿ ಕೋ.ಚೆ.’ ಕುರಿತು ಸಾಹಿತಿ ಬಸವರಾಜ ಸಾದರ, ‘ಕೋ.ಚೆ. ಅವರ ಸಾಹಿತ್ಯ’ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಎನ್.ಎಂ. ತಳವಾರ ವಿಷಯ ಮಂಡಿಸಲಿದ್ದಾರೆ. ಕೋ.ಚೆನ್ನಬಸಪ್ಪ ಅವರ ಮಗ ಡಾ.ಕೆ.ಸಿ. ಗುರುದೇವ ಹಾಗೂ ಅಳಿಯ ಕೆ.ಐ. ಗುದಗಿ ಉಪಸ್ಥಿತರಿರುವರು. ಬೆಳಿಗ್ಗೆ 10.30ಕ್ಕೆ ನಾದಹಂಸಿನಿ ಭಜನಾ ಸಂಘದವರಿಂದ ವಚನ ಗಾಯನ ನಡೆಯಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಘಟಕದ ಉಪಾಧ್ಯಕ್ಷ ಡಿ.ಎಸ್‌.ಸದಾಶಿವಮೂರ್ತಿ, ಕಾರ್ಯದರ್ಶಿ ಟಿ.ಎಸ್‌.ಕುಮಾರಸ್ವಾಮಿ, ಖಜಾಂಚಿ ಶಿವಶಂಕರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT