ಸೋಮವಾರ, ಜೂನ್ 21, 2021
30 °C

ಕಪಿಲಾ ನದಿಗೆ ಹಾರಿದ ಕೋವಿಡ್ ಸೋಂಕಿತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು (ಮೈಸೂರು): ಕೊರೊನಾ ಸೋಂಕಿಗೆ ಒಳಗಾಗಿದ್ದ ಇಲ್ಲಿನ 62 ವರ್ಷದ ವೃದ್ಧರೊಬ್ಬರು, ಹೆಜ್ಜಿಗೆ ಸೇತುವೆಯಿಂದ ಭಾನುವಾರ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಮನೆಯಿಂದ ಬೆಳಿಗ್ಗೆ ಸ್ಕೂಟರ್‌ನಲ್ಲಿ ಹೊರ ಹೋಗಿದ್ದ ಇವರು ಮನೆಗೆ ಮರಳಿರಲಿಲ್ಲ. ಕುಟುಂಬದವರು ಎಲ್ಲ ಕಡೆ ಹುಡುಕಿದರೂ ಸುಳಿವು ದೊರೆತಿರಲಿಲ್ಲ. ಕೊನೆಗೆ ಚಾಮರಾಜನಗರ ಬೈಪಾಸ್ ರಸ್ತೆಯ ಹೆಜ್ಜಿಗೆ ಸೇತುವೆ ಬಳಿ ಸ್ಕೂಟರ್‌ ಪತ್ತೆಯಾಗಿದೆ. ಆದರೆ, ವ್ಯಕ್ತಿಯ ಸುಳಿವು ಸಿಕ್ಕಿಲ್ಲ.

‘ಕುಟುಂಬದವರು ಮಾಹಿತಿ ನೀಡಿದ್ದು, ಬೋಟು ಮತ್ತು ನುರಿತ ಈಜುಗಾರರ ತಂಡದೊಂದಿಗೆ ವೃದ್ಧರ ಪತ್ತೆಗೆ ಶೋಧ ನಡೆಸಲಾಗುತ್ತಿದೆ’ ಎಂದು ನಂಜನಗೂಡು ನಗರ ಠಾಣೆಯ ಪಿಎಸ್ಐ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.