ಬುಧವಾರ, ನವೆಂಬರ್ 13, 2019
25 °C

ಲ್ಯಾನ್ಸ್‌ಡೌನ್ ಕಟ್ಟಡದ ಗೋಡೆ ಕುಸಿತ

Published:
Updated:

ಮೈಸೂರು: ಶಿಥಿಲಗೊಂಡಿರುವ ಲ್ಯಾನ್ಸ್‌ಡೌನ್‌ ಕಟ್ಟಡದ ಒಂದು ಗೋಡೆ ಕುಸಿದಿದೆ. ಇದರ ಕೆಳಗೆ ಟಾರ್ಪಲಿನ್‌ ಚೀಲ ಹಾಕಿದ್ದರಿಂದ ಅದೃಷ್ಟವಶಾತ್ ಅಪಾಯ ಸಂಭವಿಸಿಲ್ಲ.

ಈ ಕಟ್ಟಡದ ಒಂದು ಗಲ್ಲಿ ಇಂದಿಗೂ ಬಯಲು ಮೂತ್ರ ವಿಸರ್ಜನೆಯ ತಾಣವಾಗಿದೆ. ಇಲ್ಲಿನ ಗೋಡೆಗಳು ಬಿರುಕು ಬಿಟ್ಟಿದ್ದು, ತೀರಾ ಶಿಥಿಲಾವಸ್ಥೆ ತಲುಪಿವೆ. ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ಹೀಗಿದ್ದರೂ ಸಾರ್ವಜನಿಕರು ಇಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಇವರ ಜೀವ ಅಪಾಯದಲ್ಲಿದೆ.

ಪ್ರತಿಕ್ರಿಯಿಸಿ (+)