ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾಗುತ್ತಿರುವ ತೆಂಗು, ಅಗ್ಗವಾದ ಟೊಮೆಟೊ

ಬೀನ್ಸ್, ಎಲೆಕೋಸು, ಕೋಳಿಮೊಟ್ಟೆ, ಬದನೆ ಬೆಲೆ ಕುಸಿತ
Last Updated 4 ಫೆಬ್ರುವರಿ 2019, 20:20 IST
ಅಕ್ಷರ ಗಾತ್ರ

ಮೈಸೂರು: ತೆಂಗಿನಕಾಯಿ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾದರೂ ತೆಂಗಿನಕಾಯಿ ಸಿಗುತ್ತಿಲ್ಲ. ಇದರಿಂದಾಗಿ ಬೆಲೆ ಏರಿಕೆಯಾಗುತ್ತಿದೆ.

ಕಳೆದ ವರ್ಷ ಮಾರ್ಚ್‌ ತಿಂಗಳಿನಲ್ಲಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದರು. 2016ರ ಕೊನೆಯಲ್ಲೂ ತೆಂಗಿಗೆ ಬೆಂಬಲ ಬೆಲೆ ನೀಡಿ ಸರ್ಕಾರ ಖರೀದಿಸುವಂತಾಗಿತ್ತು. ಆದರೆ, ಈಗ ತೆಂಗಿನ ಬೆಲೆ ಏರಿಕೆಯಾಗಿದೆ.

ತೆಂಗಿನೆಣ್ಣೆ ತಯಾರಿಸುವ ಕಾರ್ಖಾನೆಗಳಿಗೆ ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಲಭ್ಯವಾಗುತ್ತಿಲ್ಲ. ಮುಖ್ಯವಾಗಿ ಇಂಡೋನೇಷ್ಯಾದಿಂದ ತೆಂಗಿ ಹೆಚ್ಚಾಗಿ ಬರುತ್ತಿತ್ತು. ಆದರೆ, ಕೆಲ ದಿನಗಳಿಂದ ಅಲ್ಲಿಂದಲೂ ಆವಕವಾಗಿಲ್ಲ. ಇದರಿಂದ ದೇಶಿ ತೆಂಗಿನಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವು ಖರೀದಿಸುತ್ತಿವೆ. ಮಧ್ಯವರ್ತಿಗಳ ಮೂಲಕ ಬಹುಪಾಲು ತೆಂಗು ಇಂತಹ ಕಾರ್ಖಾನೆಗಳ ಪಾಲಾಗುತ್ತಿದೆ. ಹೀಗಾಗಿ, ದೇಶಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನ ಆವಕವಾಗುತ್ತಿಲ್ಲ ಎಂದು ತೆಂಗು ವ್ಯಾಪಾರಿ ರಾಜು ತಿಳಿಸುತ್ತಾರೆ.

ಸದ್ಯ, ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ ತೆಂಗಿನಕಾಯಿ ₹ 45 ಇದೆ. ಇತರ ಮಾರುಕಟ್ಟೆಗಳಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇದೆ. ಬಿಸಿಲಿನ ಝಳ ಏರುತ್ತಿರುವುದರಿಂದ ಎಳನೀರನ್ನು ಹೆಚ್ಚಾಗಿ ರೈತರು ಕೀಳಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಲೂ ತೆಂಗಿನಕಾಯಿ ಬೆಲೆ ಏರಿಕೆಯಾಗಿದೆ.‌

ಈ ವಾರ ಟೊಮೆಟೊ ಬೆಲೆ ಕುಸಿತ ಕಂಡಿದೆ. ಕಳೆದ ತಿಂಗಳು ಕೆ.ಜಿಗೆ ₹ 40ನ್ನು ಮುಟ್ಟಿ ರೈತರಿಗೆ ಹೆಚ್ಚಿನ ಲಾಭವನ್ನು ತಂದಿತ್ತು. ಆದರೆ, ಈಗ ಇದರ ಸಗಟು ಬೆಲೆ ಕೆ.ಜಿಗೆ ₹ 7 ಆಗಿದೆ. ಕಳೆದ ವಾರ ₹ 12 ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲೂ ಇದರ ಬೆಲೆ ಇಳಿಯುತ್ತಿದೆ.

ಬೀನ್ಸ್ ದರವೂ ಈ ವಾರ ಇಳಿಕೆಯಾಗುತ್ತಿರುವುದು ಬೆಳೆಗಾರರಿಗೆ ಸಂಕಷ್ಟ ತರಿಸಿದೆ. ಫೆ. 1ರಂದು ಕೆ.ಜಿಗೆ ಸಗಟು ಬೆಲೆ ₹ 12ನ್ನು ತಲುಪಿತ್ತು. ಸದ್ಯ, ಇದು 22 ಆಗಿದೆ. ಇದೇ ರೀತಿ ಕ್ಯಾರೇಟ್ ಸಗಟು ಬೆಲೆಯೂ ಕೆ.ಜಿಗೆ ₹ 10ನಷ್ಟು ಇಳಿಕೆ ಕಂಡಿದೆ. ಕಳೆದ ವಾರ ಇದರ ಬೆಲೆ ₹ 25 ಇದ್ದದ್ದು ಈಗ ಇದು ₹ 15 ಆಗಿದೆ.

ತೊಗರಿಬೇಳೆ ಹಾಗೂ ಉದ್ದಿನಬೇಳೆಯ ಸಗಟು ಬೆಲೆ ಕೆ.ಜಿಗೆ ₹ 84ರಲ್ಲೇ ಸ್ಥಿರವಾಗಿದೆ. ಹೆಸರುಬೇಳೆ ₹ 76ರಿಂದ ₹ 74ಕ್ಕೆ ಇಳಿಕೆಯಾಗಿದ್ದರೆ, ಹೆಸರು ಕಾಳು ₹ 74ರಲ್ಲೇ ಸ್ಥಿರವಾಗಿದೆ.

ಚೇತರಿಕೆಯತ್ತ ಮೊಟ್ಟೆ ಧಾರಣೆ

ಕಳೆದೆರಡು ವಾರಗಳಿಂದ ಸತತವಾಗಿ ಇಳಿಕೆಯಾಗುತ್ತಲೇ ಇದ್ದ ಕೋಳಿ ಮೊಟ್ಟೆ ಧಾರಣೆ ಈ ವಾರ ತುಸು ಚೇತರಿಕೆ ಕಂಡಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ₹ 4.26ರಿಂದ ₹ 4.31ಕ್ಕೆ ಹೆಚ್ಚಿದೆ. ಇದು ಮೊಟ್ಟೆ ಉತ್ಪಾದಕರಲ್ಲಿ ಒಂದಿಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಇನ್ನುಳಿದಂತೆ ಏಲಕ್ಕಿ ಬಾಳೆಹಣ್ಣಿನ ದರವು ಕೆ.ಜಿಗೆ ₹ 30ರಿಂದ ₹ 40ರಲ್ಲಿ ಮಾರಾಟವಾಗುತ್ತಿದೆ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 12;07

ಬೀನ್ಸ್ ; 25; 22

ಕ್ಯಾರೆಟ್; 25; 15

ಎಲೆಕೋಸು; 08; 07

ದಪ್ಪಮೆಣಸಿನಕಾಯಿ; 35; 35

ಬದನೆ ; 18; 10

ನುಗ್ಗೆಕಾಯಿ; 40; 50

ಹಸಿಮೆಣಸಿನಕಾಯಿ; 25; 25

ಈರುಳ್ಳಿ; 10; 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT