ಬುಧವಾರ, ಅಕ್ಟೋಬರ್ 28, 2020
18 °C

ಸದನದೊಳಗೂ ಸಿದ್ದರಾಮಯ್ಯ ವೀರಾವೇಶ ತೋರಿಸಲಿ: ಸಚಿವ ಎಸ್.ಟಿ. ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Minister ST Somashekar

ಮೈಸೂರು: ‘ಸಿದ್ದರಾಮಯ್ಯನವರು ವೀರಾವೇಶದಿಂದ ಮೈಸೂರಿನಲ್ಲಿ ಏನೇನೋ ಮಾತನಾಡಿದ್ದಾರೆ. ಸೆ. 21ರಂದು ಅಧಿವೇಶನ ಆರಂಭವಾಗಲಿದ್ದು, ಸದನದೊಳಗೂ ಅದೇ ರೀತಿ ಮಾತಾಡಲಿ. ಅಷ್ಟೇ ವೀರಾವೇಶದಿಂದ ಉತ್ತರ ನೀಡುವಂಥ ಶಕ್ತಿಯನ್ನು ದೇವರು ನಮಗೂ ನೀಡಿದ್ದಾನೆ’ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶನಿವಾರ ಇಲ್ಲಿ ತಿಳಿಸಿದರು.

ಸರ್ಕಾರ ಸತ್ತಿದೆ, ಸಚಿವರೂ ಕೆಲಸ ಮಾಡುತ್ತಿಲ್ಲ, ಇಬ್ಬಿಬ್ಬರು ಮುಖ್ಯಮಂತ್ರಿ ಇದ್ದಾರೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

‘ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾವು ಆಡಳಿತ ಪಕ್ಷದವರು ಆಡಳಿತ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು