ಶುಕ್ರವಾರ, ಅಕ್ಟೋಬರ್ 7, 2022
24 °C

ಕಾಂಗ್ರೆಸ್‌ನಿಂದಾಗಿ ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಬೆಂಬಲಿಸಿದೆವು: ಶಾಸಕ ಜಿಟಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕಾಂಗ್ರೆಸ್‌ ನಡೆಯ ಕಾರಣದಿಂದಾಗಿ ನಾವು ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದೆವು’ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮೇಯರ್‌–ಉಪ ಮೇಯರ್ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ದೇಶನದಂತೆ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಲಾಗಿತ್ತು. ನನ್ನ ಕ್ಷೇತ್ರದವರೇ ಆದ ನಿರ್ಮಲಾ ಅವರನ್ನು ಅಪಹರಿಸಿ ಉಪ ಮೇಯರ್ ಅಭ್ಯರ್ಥಿ ಮಾಡಿದರು. ಆಗ ನಮ್ಮ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ಒಗ್ಗೂಡಿ ಬಿಜೆಪಿಯ ಮೇಯರ್‌ ಅಭ್ಯರ್ಥಿಗೆ ಮತ ಹಾಕುವ ತೀರ್ಮಾನ ಕೈಗೊಂಡೆವು’ ಎಂದು ಹೇಳಿದರು.

‘ಜಾತಿ ಪ್ರಮಾಣಪತ್ರ ಕೊಡದ ಸ್ವಯಂಕೃತ ಅಪರಾಧದಿಂದ ಅನಿವಾರ್ಯವಾಗಿ ಎರಡೂ ಸ್ಥಾನ ಬಿಜೆಪಿಗೆ ದೊರೆತಿದೆ. ನಾವು ಯಾರಿಗೂ ‘ಎ’ ಅಥವಾ ‘ಬಿ’ ಟೀಂ ಅಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು