ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋನಿಕಾ, ಲಿಖಿತ್‌ಗೆ ಅಗ್ರಸ್ಥಾನ

ಆರ್‌ಎನ್‌ಎಂ ಸ್ಮಾರಕ ರಸ್ತೆ ಓಟದ ಸ್ಪರ್ಧೆ
Last Updated 2 ಮೇ 2019, 13:05 IST
ಅಕ್ಷರ ಗಾತ್ರ

ಮೈಸೂರು: ಕುರುಬೂರು ವಿದ್ಯಾ ದರ್ಶಿನಿ ಶಾಲೆಯ ಎಲ್‌.ಮೋನಿಕಾ, ನಂಜನಗೂಡಿನ ಸಿಟಿಜನ್‌ ಪಬ್ಲಿಕ್‌ ಶಾಲೆಯ ಲಿಖಿತ್‌ ಅವರು ಆರ್‌ಎನ್‌ಎಂ ಸ್ಮಾರಕ ರಸ್ತೆ ಓಟದಲ್ಲಿ ಕ್ರಮವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಮೈಸೂರು ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೋನಿಕಾ ಅವರು 11 –15 ವರ್ಷದೊಳಗಿನವರ ವಿಭಾಗದಲ್ಲಿ ಮಿಂಚಿದರು. ವಿದ್ಯಾದರ್ಶಿನಿ ಶಾಲೆಯವರೇ ಆದ ಮೌನಶ್ರೀ ಮತ್ತು ಮೇಘನಾ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಇದೇ ವಯೋವರ್ಗದ ಬಾಲಕರ ವಿಭಾಗದಲ್ಲಿ ಲಿಖಿತ್‌ ಮಿಂಚಿದರು. ಯುನಿಕ್‌ ಅಥ್ಲೆಟಿಕ್‌ ಕ್ಲಬ್‌ನ ಸಿ.ನಿಖಿಲ್‌ ಮತ್ತು ಕುರುಬೂರಿನ ನಿರ್ವಾಣ ಹೈಸ್ಕೂಲ್‌ನ ದೊರೆಸ್ವಾಮಿ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

40 ವರ್ಷಕ್ಕಿಂತ ಮೇಲಿನ ಪುರುಷರ ವಿಭಾಗದಲ್ಲಿ ಮಹಾಜನ ಪ್ರಥಮದರ್ಜೆ ಕಾಲೇಜಿನ ಚೆಲುವೇಗೌಡ ಮೊದಲ ಸ್ಥಾನ ಪಡೆದರು. ಜೆ.ಕೆ.ಟೈರ್ಸ್‌ನ ಎಸ್‌.ಎಂ.ಹರೀಶ್ ಮತ್ತು ನಗರ ಪೊಲೀಸ್‌ನ ನಾಗೇಂದ್ರ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು.

ಫಲಿತಾಂಶ ಹೀಗಿದೆ: 11ರಿಂದ 15 ವರ್ಷದವರ ವಿಭಾಗ
ಬಾಲಕರು:
ಲಿಖಿತ್–1, ಸಿ.ನಿಖಿಲ್–2, ಎನ್‌.ದೊರೆಸ್ವಾಮಿ–3
ಬಾಲಕಿಯರು: ಎಲ್‌.ಮೋನಿಕಾ–1, ಎನ್‌.ಮೌನಶ್ರೀ–2, ಎಸ್‌.ಮೇಘನಾ–3

16ರಿಂದ 39 ವರ್ಷದವರ ವಿಭಾಗ
ಪುರುಷರು:
ಎಚ್‌.ಎನ್.ಬೆಲ್ಲನಾಯಕ–1, ಎಸ್‌.ಆರ್‌.ರಾಹುಲ್–2, ವಿ.ರವಿ–3
ಮಹಿಳೆಯರು: ಎಂ.ವೀಣಾ–1, ಮಂಜುಳಾ–2, ಬಿ.ಚೈತ್ರಾ–3,

40 ವರ್ಷಕ್ಕಿಂತ ಮೇಲಿನವರು
ಪುರುಷರು:
ಚೆಲುವೇಗೌಡ–1, ಎಸ್‌.ಎಂ.ಹರೀಶ್–2, ಎಂ.ಡಿ.ನಾಗೇಂದ್ರ–3
ಮಹಿಳೆಯರು: ಎಂ.ಎಸ್‌.ಸರೋಜ–1, ವಿ.ಸುಮತಿ–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT