ಗುರುವಾರ , ಜೂನ್ 17, 2021
21 °C

ಮೈಸೂರು: ಮದ್ಯದ ಅಮಲಿನಲ್ಲಿ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಚಾಮೇಗೌಡನ ಹುಂಡಿಯಲ್ಲಿ ಮಣಿಕಂಠಸ್ವಾಮಿ ಎಂಬಾತ ತನ್ನ ತಾಯಿ ಸೇರಿದಂತೆ ಕುಟುಂಬದ ನಾಲ್ವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈತ ತನ್ನ ತಾಯಿ ಕೆಂಪಾಜಮ್ಮ (60), ಗರ್ಭಿಣಿ ಪತ್ನಿ ಗಂಗಾ(28), ಪುತ್ರರಾದ ರೋಹಿತ್ (4) ಮತ್ತು ಸಾಮ್ರಾಟ್ (4) ಅವರನ್ನು ಮದ್ಯ ಸೇವಿಸಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಬು ಗರ್ಭಿಣಿಯಾಗಿದ್ದ ಗಂಗಾ‌ ಅವರನ್ನು ಹೆರಿಗೆಗಾಗಿ ಇಂದು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಸದ್ಯ ಮೃತದೇಹಗಳು ಮ‌ನೆಯ ಒಳಗೆ ಇದ್ದು, ಆರೋಪಿಯನ್ನು ಬಂಧಿಸುವವರೆಗೂ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಮೃತ ಗಂಗಾ ಅವರ ಸಂಬಂಧಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು