ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟ್ರೀಟ್ಸ್‌ ಫಾರ್‌ ಪೀಪಲ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ಮೈಸೂರಿಗೆ ಸ್ಥಾನ

Last Updated 1 ನವೆಂಬರ್ 2020, 4:01 IST
ಅಕ್ಷರ ಗಾತ್ರ

ಮೈಸೂರು: ನಗರಗಳನ್ನು ಪಾದಚಾರಿ ಸ್ನೇಹಿಯಾಗಿಸುವ ಉದ್ದೇಶದಿಂದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಆರಂಭಿಸಿರುವ ‘ಸ್ಟ್ರೀಟ್ಸ್‌ ಫಾರ್‌ ಪೀಪಲ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ಮೈಸೂರು ನಗರವೂ ಸ್ಥಾನ ಪಡೆದಿದೆ.

ಈ ಸ್ಪರ್ಧೆಗೆ ದೇಶದ ಒಟ್ಟು 113 ನಗರಗಳನ್ನು ಆಯ್ಕೆ ಮಾಡಲಾಗಿದೆ. ನಗರಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಅಂಕ ನೀಡಲಾಗುತ್ತದೆ.

ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿವೆ. ಮೊದಲ ಹಂತದ ಅವಧಿ 2021ರ ಫೆಬ್ರುವರಿವರೆಗೆ ಇರಲಿದೆ. ಚಾಲೆಂಜ್‌ನಲ್ಲಿರುವ ನಗರಗಳು ಈ ಅವಧಿಯಲ್ಲಿ ಕನಿಷ್ಠ ಒಂದು ಪಾದಚಾರಿಸ್ನೇಹಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಮೊದಲ ಹಂತದಲ್ಲಿ ಗೆದ್ದ 11 ನಗರಗಳನ್ನು ಎರಡನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

ಕರ್ನಾಟಕದಿಂದ ಮೈಸೂರು ಅಲ್ಲದೆ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರು ನಗರಗಳು ಕೂಡಾ ಸ್ಪರ್ಧೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT