ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ರ‍್ಯಾಂಕ್‌

Last Updated 15 ಸೆಪ್ಟೆಂಬರ್ 2022, 15:37 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯವು ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಝಡ್‌ಎ)ದಿಂದ ಈಚೆಗೆ ಬಿಡುಗಡೆ ಮಾಡಿರುವ ಎಂಇಇ (ಮ್ಯಾನೇಜ್‌ಮೆಂಟ್ ಎಫೆಕ್ಟಿವ್ ಇವ್ಯಾಲ್ಯುಯೇಷನ್‌) ಮೌಲ್ಯಮಾಪನ ವರದಿಯಲ್ಲಿ ರ‍್ಯಾಂಕ್‌ ಗಳಿಸಿದೆ.

ಸಮಗ್ರ ವಿಭಾಗದಲ್ಲಿ 3ನೇ ಹಾಗೂ ದೊಡ್ಡ ಮೃಗಾಲಯಗಳ ಪಟ್ಟಿಯಲ್ಲಿ 2ನೇ ರ‍್ಯಾಂಕ್‌ ಗಳಿಸಿದೆ. ಭುವನೇಶ್ವರದಲ್ಲಿ ನಡೆದ ಮೃಗಾಲಯಗಳ ನಿರ್ದೇಶಕರ ಸಮ್ಮೇಳನದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸಮಗ್ರ ವಿಭಾಗದಲ್ಲಿ ಡಾರ್ಜೆಲಿಂಗ್‌ನ ಪದ್ಮಜಾ ನಾಯ್ಡು ಹಿಮಾಲಯನ್‌ ಮೃಗಾಲಯ ಮತ್ತು ಚೆನ್ನೈನ ಎ.ಅಣ್ಣ ಮೃಗಾಲಯ ಮೊದಲ ಎರಡು ಸ್ಥಾನ ಗಳಿಸಿವೆ. ದೊಡ್ಡ ಝೂಗಳ ವಿಭಾಗದಲ್ಲೂ ಎ.ಅಣ್ಣ ಮೃಗಾಲಯ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮೈಸೂರು ಮೃಗಾಲಯವಿದೆ ಎಂದು ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT