ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಟ್ಟಿ ತಿಂದು ಅಭಿವೃದ್ಧಿ ಚರ್ಚೆ: ಕಟೀಲ್‌

Last Updated 1 ಜೂನ್ 2020, 16:36 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯ ಸರ್ಕಾರ ಸುಭದ್ರವಾಗಿದೆ. ಹೊರಗಿನಿಂದ ಶಾಸಕರನ್ನು ಕರೆದುಕೊಂಡು ಬಂದು ಆಡಳಿತ ನಡೆಸುವ ಅಗತ್ಯ ನಮಗಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಸೋಮವಾರ ಇಲ್ಲಿ ತಿಳಿಸಿದರು.

‘ನಮ್ಮ ಪಕ್ಷದ ಶಾಸಕರು ಪ್ರತ್ಯೇಕ ಸಭೆ ನಡೆಸಿಲ್ಲ. ರೊಟ್ಟಿ ತಿನ್ನಲು ಒಂದೆಡೆ ಸೇರಿ ಅಭಿವೃದ್ಧಿ ವಿಚಾರ ಚರ್ಚಿಸಿದ್ದಾರೆ. ಯಾರೂ ಯಾವುದೇ ಬೇಡಿಕೆ ಇಟ್ಟಿಲ್ಲ. ಯಾರನ್ನೂ ಬ್ಲ್ಯಾಕ್‌ಮೇಲ್‌ ಮಾಡುತ್ತಿಲ್ಲ. ಅಶಿಸ್ತಿಗೆ ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ. ಅಂಥ ಸಂದರ್ಭ ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದರು.

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬ ಪ್ರಶ್ನೆಗೆ, ‘ಅದೇ ಬೆಂಕಿಗೆ ನೀರು ಹಾಕಿದರೂ ಹೊಗೆ ಬರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.

‘ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ನಮ್ಮ‌ ನಾಯಕ ಆಗಿರುವುದರಿಂದಲೇ ಮುಖ್ಯಮಂತ್ರಿ ಮಾಡಲಾಗಿದೆ. ಅವರ ವಿರುದ್ಧ ಯಾರಿಗೂ ಯಾವುದೇ ಅಸಮಾಧಾನ ಇಲ್ಲ’ ಎಂದು ಹೇಳಿದರು.

ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಸಂಬಂಧ ಪ್ರತಿಕ್ರಿಯಿಸಿ, ‘ಅಪ್ಪ ಮುಖ್ಯಮಂತ್ರಿಯಾದ ತಕ್ಷಣ ಅವರ ಮಕ್ಕಳು, ಕುಟುಂಬದವರು ರಾಜಕಾರಣದಲ್ಲಿ ಇರಬಾರದು ಎಂದೇನಿಲ್ಲ. ಅವರವರ ಸಾಮರ್ಥ್ಯದಿಂದ ಅವಕಾಶ ಪಡೆದುಕೊಂಡಿದ್ದಾರೆ. ಪಕ್ಷ ನಡೆಸುವರು ನಾವು, ಸರ್ಕಾರ ನಡೆಸುವವರು ಮುಖ್ಯಮಂತ್ರಿ. ಕುಟುಂಬ ರಾಜಕಾರಣ ವಿಚಾರದಲ್ಲಿ ನಮಗೂ ಬೇರೆ ಪಕ್ಷಗಳಿಗೂ ವ್ಯತ್ಯಾಸವಿದೆ’ ಎಂದರು.‌

‘ಬಿಜೆಪಿ ಗಟ್ಟಿ–ಸಿದ್ರಾಮಣ್ಣ ಬಯಕೆ’

‘ಕುಮಾರಣ್ಣನನ್ನು ಅಧಿಕಾರದಿಂದ ಇಳಿಸಿದ್ದೇ ಸಿದ್ರಾಮಣ್ಣ. ಈಗಲೂ ಅವರು ಅಸಮಾಧಾನದಲ್ಲೇ ಇದ್ದಾರೆ. ತಾವು ಮತ್ತೆ ಮುಖ್ಯಮಂತ್ರಿ ಆಗಲು ಡಿ.ಕೆ.ಶಿವಕುಮಾರ್‌ ಬಿಡಲ್ಲ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ, ಬಿಜೆಪಿ ಗಟ್ಟಿಯಾಗುವುದನ್ನು ಸಿದ್ರಾಮಣ್ಣ ಬಯಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷವನ್ನು ತಿವಿದರು.

‘ಚಿಲ್ಲರೆ ರಾಜಕಾರಣ’

‘ವಲಸೆ ಕಾರ್ಮಿಕರನ್ನು ಎತ್ತಿಕಟ್ಟುವ ಮೂಲಕ ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡುತ್ತಿವೆ. ಸರ್ಕಾರವನ್ನು ಟೀಕಿಸಲು ಅವರಿಗೆ ಬೇರೆ ಅಸ್ತ್ರಗಳೇ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಜನರ ಕಣ್ಣೀರೊರೆಸುವ ಕೆಲಸ ಮಾಡಬೇಕೇ ಹೊರತು ರಾಜಕಾರಣ ಮಾಡುವ ಸಂದರ್ಭ ಇದಲ್ಲ. ಕೋವಿಡ್‌ ನಿರ್ವಹಣೆ ಸಂಬಂಧ ವಿರೋಧ ಪಕ್ಷಗಳೇ ಮುಖ್ಯಮಂತ್ರಿಯ ಕಾರ್ಯವೈಖರಿ ಶ್ಲಾಘಿಸುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT