ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಸೆಳೆಯಲು ವರ್ಷವಿಡೀ ‘ನಂದಿನಿ’ ಉತ್ಸವ

ಕೆಎಂಎಫ್‌ ಉತ್ಪನ್ನಗಳ ರಿಯಾಯಿತಿ ದರದಲ್ಲಿ ಮಾರಾಟ, ವಿವಿಧ ಉತ್ಪನ್ನ ಬಿಡುಗಡೆ
Last Updated 14 ಫೆಬ್ರುವರಿ 2021, 4:12 IST
ಅಕ್ಷರ ಗಾತ್ರ

ಮೈಸೂರು: ತನ್ನ ಉತ್ಪನ್ನಗಳನ್ನು ಬ್ರ್ಯಾಂಡ್‌ ಆಗಿ ಪರಿಚಯಿಸಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಜೊತೆಗೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಲು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವೂ (ಕೆಎಂಎಫ್‌) ಮಾರುಕಟ್ಟೆ ತಂತ್ರಗಾರಿಕೆಯ ಮೊರೆ ಹೋಗಿದೆ.

ಹಾಲಿನ ಉತ್ಪನ್ನಗಳ ಜೊತೆಗೆ, ಕೆಎಂಎಫ್‌ನಲ್ಲಿ ತಯಾರಾಗುವ ‘ನಂದಿನಿ’ ಬ್ರ್ಯಾಂಡ್‌ನ ಸಿಹಿ ತಿನಿಸು ಹಾಗೂ ಇತರ ತರಹೇವಾರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಜೊತೆಗೆ, ಪ್ರತಿಸ್ಪರ್ಧಿ ಗಳು ಒಡ್ಡುವ ರಿಯಾಯಿತಿ, ಸಬ್ಸಿಡಿ ದರದಲ್ಲಿ ಮಾರಾಟದ ತಂತ್ರಗಾರಿಕೆಯ ಪೈಪೋಟಿಯನ್ನೂ ಎದುರಿಸಲು ಸಜ್ಜಾಗಿದೆ.

ಹಬ್ಬ, ವಿಶೇಷ ದಿನಗಳ ಸಂದರ್ಭದಲ್ಲಷ್ಟೇ ರಿಯಾಯಿತಿ ಘೋಷಿಸದೆ, ವರ್ಷವಿಡೀ ‘ನಂದಿನಿ’ ಉತ್ಪನ್ನಗಳಿಗೆ ರಿಯಾಯಿತಿ ದರ ನೀಡಲು ಮುಂದಾಗಿದೆ ಎಂದು ಕೆಎಂಎಫ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಯಾವ್ಯಾವ ತಿಂಗಳಿನಲ್ಲಿ ಯಾವ ಉತ್ಪನ್ನಕ್ಕೆ ರಿಯಾಯಿತಿ ನೀಡಬೇಕು. ಯಾವಾಗ ಉತ್ಸವ ನಡೆಸಬೇಕು ಎಂಬುದನ್ನು ಒಕ್ಕೂಟದ ಕಾರ್ಯ ನಿರೂಪಣಾ ಸಮಿತಿ ಸಭೆಯಲ್ಲೇ ನಿರ್ಧರಿಸಲಾಗಿದೆ. 2021ನೇ ಸಾಲಿನ ಮಾರಾಟ ಕ್ರಿಯಾ ಯೋಜನೆಗೆ ಒಕ್ಕೂಟ ಸಮ್ಮತಿಸಿದ್ದು, ಎಲ್ಲೆಡೆಯೂ ಜಾರಿಗೊಳಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಎಂಎಫ್‌ನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೆಎಂಎಫ್‌, ವಾರ್ಷಿಕ 16 ಸಾವಿರ ಟನ್‌ ನಂದಿನಿ ಉತ್ಪನ್ನವನ್ನು ಮಾರಾಟ ಮಾಡುತ್ತಿದೆ. 2021ನೇ ಸಾಲಿನಲ್ಲಿ 20 ಸಾವಿರ ಟನ್‌ ಮಾರಾಟ ಗುರಿ ನಿಗದಿಪಡಿಸಿಕೊಂಡಿದ್ದು, ಈ ಗುರಿ ಸಾಧನೆಗಾಗಿ ಮಾರುಕಟ್ಟೆಯ ತಂತ್ರಗಾರಿಕೆ ಬಳಸಿದೆ. ತನ್ನ ಲಾಭಾಂಶ ದಲ್ಲಿನ ಕೊಂಚ ಪ್ರಮಾಣವನ್ನು ಗ್ರಾಹಕರಿಗೆ ಬಿಟ್ಟುಕೊಟ್ಟಿದೆ. ಇದರಿಂದ ಹೆಚ್ಚಿನ ಪ್ರಮಾಣದ ಮಾರಾಟ ನಡೆಯುವುದರಿಂದ ಒಕ್ಕೂಟಕ್ಕೆ ಬರುವ ಆದಾಯ, ಲಾಭಾಂಶ ಕಡಿಮೆಯಾಗದು. ರೈತರಿಂದ ಖರೀದಿಸುವ ಹಾಲಿನ ಮೌಲ್ಯವರ್ಧನೆ ಕೂಡ ಆಗಲಿದೆ’ ಎಂದು ಅವರು ಹೇಳಿದರು.

ಕೆಎಂಎಫ್‌ನ ಮಾರಾಟ ಕ್ರಿಯಾ ಯೋಜನೆ

ತಿಂಗಳು; ರಿಯಾಯಿತಿ ನೀಡಲಾಗುವ ಉತ್ಪನ್ನಗಳು

ಜನವರಿ; ನಂದಿನಿ ಸಿಹಿ ಉತ್ಸವ, ಚೀಸ್‌ ಫೆಸ್ಟ್‌

ಫೆಬ್ರುವರಿ; ಬೆಣ್ಣೆ, ಪನ್ನೀರ್, ಖೋವಾ, ಆರ್‌ಟಿಸಿ, ಶ್ರೀಖಂಡ್, ಗ್ರೀಕ್‌ ಯೋಗರ್ಟ್‌

ಮಾರ್ಚ್‌; ನಂದಿನಿ ಐಸ್‌ ಕ್ರೀಂ, ಪ್ರೀಮಿಯಂ ಚಾಕೋಲೇಟ್‌ ಬಿಡುಗಡೆ

ಏಪ್ರಿಲ್‌; ಸುವಾಸಿತ ಹಾಲಿಗೆ ಕಾಂಬೋ ಆಫರ್‌

ಮೇ; ಆರ್‌ಟಿಸಿ, ಶ್ರೀಖಂಡ್‌, ಗ್ರೀಕ್‌ ಯೋಗರ್ಟ್‌

ಜೂನ್‌; ಸಿಹಿ ಉತ್ಸವ

ಜುಲೈ; ಚೀಸ್‌, ಬ್ರೆಡ್‌ ಕಾಂಬೋ ಆಫರ್‌

ಆಗಸ್ಟ್‌/ಸೆಪ್ಟೆಂಬರ್‌; ತುಪ್ಪ, ಕೆನೆ ರಹಿತ ಹಾಲಿನ ಪುಡಿ, ಡೇರಿ ವೈಟ್ನರ್‌ ರೀಟೇಲ್‌ ಪ್ಯಾಕ್‌ಗಳಿಗೆ ಯೋಜನೆ

ಅಕ್ಟೋಬರ್; ಸಾಲು ಸಾಲು ಹಬ್ಬಗಳಿರುವುದರಿಂದ ಯಾವುದೇ ಸ್ಕೀಂ ಇಲ್ಲ

ನವೆಂಬರ್; ಪಾಯಸ ಮಿಕ್ಸ್, ಬಾದಾಮ್‌ ಪೌಡರ್‌, ಜಾಮೂನ್‌ ಮಿಕ್ಸ್‌, ಸಿರಿಧಾನ್ಯ ಶಕ್ತಿ ಕಾಂಬೋ ಆಫರ್‌

ಡಿಸೆಂಬರ್; ಸಿಹಿ ಉತ್ಸವ, ಚೀಸ್‌ ಫೆಸ್ಟ್‌, ಚಾಕೋಲೇಟ್‌ ಫೆಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT