ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಮಯವಾದ ಮೈಸೂರು ಅರಮನೆ

ರಿಹರ್ಸಲ್‌ಗೆ ಭರಪೂರ ಸ್ಪಂದನೆ
Last Updated 19 ಜೂನ್ 2019, 16:47 IST
ಅಕ್ಷರ ಗಾತ್ರ

ಮೈಸೂರು: ಮೂಡಣದಲ್ಲಿ ದಿನಕರ ಮೈಮುರಿದು ಆಕಳಿಸುತ್ತಾ ಎದ್ದೇಳುತ್ತಿದ್ದಂತೆ ಅರಮನೆ ಆವರಣದಲ್ಲಿ ಯೋಗಪಟುಗಳು ಸೇರಲಾರಂಭಿಸಿದರು. ಕತ್ತಲ ತೆರೆಯು ಸರಿದು, ಬೆಳಕು ಹರಿಯುತ್ತಿದ್ದಂತೆ ವಿವಿಧ ಯೋಗಾಸನಗಳನ್ನು ಯೋಗಪಟುಗಳು ಪ್ರದರ್ಶಿಸಲಾರಂಭಿಸಿದರು.

ಜಿಲ್ಲಾಡಳಿತ, ಯೋಗ ಫೆಡರೇಷನ್ ಆಫ್ ಟ್ರಸ್ಟ್‌ ಹಾಗೂ ಇತರ ಸಂಘಸಂಸ್ಥೆಗಳು ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗದಿನಾಚರಣೆಯ ತಾಲೀಮಿನಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು ವಿಶೇಷ ಎನಿಸಿತ್ತು.

‘ಸಂಗಚಧ್ವಂ, ಸಂವದಧ್ವಂ ಸಂವೋ ಮನಾಂಸಿ ಜಾನತಾಮ್...’ ಎಂಬ ಪ್ರಾರ್ಥನೆಯೊಂದಿಗೆ ಆರಂಭವಾದ ಯೋಗಾಭ್ಯಾಸವು ತಾಡಾಸನದಿಂದ ಆರಂಭವಾಯಿತು.

ನಂತರ, ವೃಕ್ಷಾಸನ, ಪಾದಹಸ್ತಾಸನ–1, ಪಾದಹಸ್ತಾಸನ–2, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಯುಕ್ತಾಸನ ಹಾಗೂ ಶವಾಸನದ ಮೂಲಕ ಯೋಗಾಸನ ಕೊನೆಗೊಂಡಿತು.

ನಂತರ, ಪ್ರಾಣಾಯಮಗಳನ್ನು ಮಾಡಲಾಯಿತು. ಕಪಾಲಭಾತಿ, ನಾಡಿಶೋಧನ, ಶೀತಲೀ, ಭ್ರಾಮರಿ ಪ್ರಾಣಾಯಮಗಳು ಹಾಗೂ ಕೊನೆಯಲ್ಲಿ ಧ್ಯಾನದ ಮೂಲಕ ತಾಲೀಮಿಗೆ ಮಂಗಳ ಹಾಡಲಾಯಿತು.

ಯೋಗ ಸ್ಫೋರ್ಟ್ ಫೌಂಡೇಷನ್ (ವೈಎಸ್‌ಎಫ್), ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್‌), ಮೈಸೂರು ಯೋಗ ಒಕ್ಕೂಟ, ಬಾಬಾ ರಾಮದೇವ್ ಭಾರತ್ ಸ್ವಾಭಿಮಾನಿ ಟ್ರಸ್ಟ್‌ ಸೇರಿದಂತೆ ಇನ್ನಿತರ ಸಂಘಟನೆಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದವು.

ಒಟ್ಟು 19 ಬಗೆಯ ಯೋಗಾಸನಗಳನ್ನು ಯೋಗಪಟುಗಳು ಪ್ರದರ್ಶಿಸಿದರು. ಮುಂದಿನ ಭಾನುವಾರ ಜೂನ್ 16ರಂದು ರೇಸ್‌ಕೋರ್ಸ್‌ನಲ್ಲಿ ಮೆಗಾ ತಾಲೀಮು ನಡೆಯಲಿದೆ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT