ಮಂಗಳವಾರ, ಆಗಸ್ಟ್ 9, 2022
20 °C

ಕೋವಿಡ್‌ನಲ್ಲೂ ರಾಜಕೀಯ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕೆ.ಆರ್‌. ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌ ಕೋವಿಡ್‌ ಕಾಲಘಟ್ಟದಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಕೆ.ವಿ.ಮಲ್ಲೇಶ್‌ ದೂರಿದ್ದಾರೆ.

‘ಸರ್ಕಾರ, ಪಾಲಿಕೆಯ ಯೋಜನೆಗಳಿಗೆ ಮತ್ತೊಂದು ಹೆಸರು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೈಯಕ್ತಿಕವಾಗಿ ಯಾವೊಂದು ಸಹಾಯವನ್ನು ಕ್ಷೇತ್ರದ ಜನರಿಗೆ ಮಾಡುತ್ತಿಲ್ಲ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

‘ಜೂನ್‌ 21ರಿಂದ ಲಸಿಕೆ ಹಾಕಲಾಗುವುದು ಎಂದು ಮೋದಿಯೇ ಹೇಳಿದ್ದಾರೆ. ಪಾಲಿಕೆ ಆಡಳಿತ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದೆ. ಇವೆಲ್ಲವನ್ನೂ ತಮ್ಮದೇ ಸಾಧನೆ ಎಂಬಂತೆ ರಾಮದಾಸ್‌ ಬಿಂಬಿಸಿಕೊಳ್ಳುತ್ತಿದ್ದಾರಷ್ಟೇ. ಕ್ಷೇತ್ರದ ಜನರಿಗೆ ವೈಯಕ್ತಿಕವಾಗಿ ಯಾವೊಂದು ನೆರವು ನೀಡುತ್ತಿಲ್ಲ’ ಎಂದು ಮಲ್ಲೇಶ್‌ ಕಿಡಿಕಾರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು