ಮಂಗಳವಾರ, ಜೂನ್ 15, 2021
20 °C

ವಿದ್ಯುತ್ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸೆಸ್ಕ್‌ ವತಿಯಿಂದ 66/11 ಸೌತ್ (ಮೈಸೂರು) ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.14ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ನಂಜುಮಳಿಗೆ ವೃತ್ತ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ನಾರಾಯಣ ಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾ ಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರೀಯಲ್ ಸಬರ್ಬ್, ವಿಶ್ವೇಶ್ವರಯ್ಯ ನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ, ಗುಂಡೂರಾವ್ ನಗರ, ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೈಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ.ಕೊಪ್ಪಲು, ಶಿವಪುರ, ದೇವಲಾಪುರ ಹೋಬಳಿ, ಆದಿಚುಂಚನಗಿರಿ ರಸ್ತೆ, ಜೆ.ಪಿ.ನಗರ, ಶ್ರೀರಾಂಪುರ 2ನೇ ಹಂತ, ರಮಾಬಾಯಿ ನಗರ, ಮಹದೇವಪುರ, ಜಯನಗರ, ಪರಸಯ್ಯನಹುಂಡಿ, ಶಿವಪುರ, ಕುವೆಂಪುನಗರ ‘ಕೆ’ ಬ್ಲಾಕ್, ಅಪೊಲೊ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಗೊರೂರು ಗ್ರಾಮ, ಕಳಲವಾಡಿ, ಕೋಟೆಹುಂಡಿ, ಯಡಹಳ್ಳಿ, ರಾಯನಕೆರೆ, ಸರಸ್ವತಿಪುರಂ 1ನೇ ಮುಖ್ಯರಸ್ತೆಯಿಂದ 6ನೇ ಮುಖ್ಯರಸ್ತೆ ಭಾಗಶಃ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

66/11 ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲೂ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 2ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ರಾಮಾನುಜ ರಸ್ತೆ, ಹೊಸಬಂಡಿಕೇರಿ, ಜೆಎಸ್ಎಸ್ ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂನ ಹಲವು ಭಾಗಗಳು, ಸಬರ್ಬ್ ಬಸ್ ನಿಲ್ದಾಣ, ನಜರಬಾದ್, ಇಟ್ಟಿಗೆಗೂಡು, ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು, ತಾಲ್ಲೂಕು ಕಚೇರಿ, ಡಿ.ದೇವರಾಜ ಅರಸು ರಸ್ತೆ, ಬಿ.ಎನ್.ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಆಲನಹಳ್ಳಿಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್‌ ವ್ಯತ್ಯಯವಾಗಲಿದೆ.

ಗಿರಿದರ್ಶಿನಿ ಬಡಾವಣೆ, ಅರಮನೆ ಸುತ್ತಮುತ್ತಲಿನ ಪ್ರದೇಶಗಳು, ಶ್ರೀ ಹರ್ಷ ರಸ್ತೆ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.