ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಕಡ್ಡಾಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ನಮ್ಮನ್ನು ಬೀದಿಗಿಳಿಸಿದ್ದು ಏಕೆ?– ಶಿಕ್ಷಕರ ಪ್ರಶ್ನೆ

Published:
Updated:
Prajavani

ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅವೈಜ್ಞಾನಿಕ ಕಡ್ಡಾಯ ವರ್ಗಾವಣೆ ರದ್ದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವರ್ಗಾವಣೆಗೆ ವಿರೋಧ ಇಲ್ಲ. ವರ್ಗಾವಣೆ ಮಾಡುವುದಾದರೆ ವೈಜ್ಞಾನಿಕವಾಗಿ ವರ್ಗಾವಣೆ ಮಾಡಿ. ಅವೈಜ್ಞಾನಿಕವಾಗಿ ಕಡ್ಡಾಯ ವರ್ಗಾವಣೆ ಎಂಬುದನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು.

ಕಡ್ಡಾಯ ವರ್ಗಾವಣೆ ಮಾಡಬಾರದು ಎಂದು ಹೈಕೋರ್ಟ್‌ ಆದೇಶ ಇದ್ದರೂ ವರ್ಗಾವಣೆ ಮಾಡುತ್ತಿರುವುದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ಅವರು ಎಚ್ಚರಿಸಿದರು.

ಶಿಕ್ಷಕಿ ಶಾರದಾ ಮಾತನಾಡಿ, ‘ನಮ್ಮನ್ನು ಸರ್ಕಾರ ಈ ರೀತಿ ಬೀದಿಗಿಳಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಕಡ್ಡಾಯ ವರ್ಗಾವಣೆ ಎಂದು ನಮ್ಮ ಕುತ್ತಿಗೆಯನ್ನು ಸರ್ಕಾರ ಹಿಸುಕುತ್ತಿದೆ. ನಾವೇನು ವರ್ಗಾವಣೆ ಮಾಡಬೇಡಿ ಎಂದು ಹೇಳುತ್ತಿಲ್ಲ. ಜೇಷ್ಠತೆಯ ಆಧಾರದ ಮೇಲೆ ವರ್ಗಾವಣೆ ಮಾಡಿ. ಬಡ್ತಿ ನೀಡಿದ ನಂತರ ಖಾಲಿ ಉಳಿಯುವ ಹುದ್ದೆಗಳಿಗೆ ವರ್ಗಾವಣೆ ಮಾಡಿ’ ಎಂದು ಆಗ್ರಹಿಸಿದರು

Post Comments (+)