ಮಂಗಳವಾರ, ಅಕ್ಟೋಬರ್ 20, 2020
25 °C

ಮಂಡ್ಯ: ಮಳೆಗೆ ನೆಲಕಚ್ಚಿದ ವೀಳ್ಯದೆಲೆ ತೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಬಿರುಸಿನ ಮಳೆಯಾಗಿದೆ.

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ, ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ವೀಳ್ಯದೆಲೆ ತೋಟ ನೆಲ ಕಚ್ಚಿದೆ. ಬ್ಯಾಡರಹಳ್ಳಿ ಗ್ರಾಮದ ಶಂಕರ ಮತ್ತು ಬಾಳೆಹೊನ್ನಿಗ ಗ್ರಾಮದ ಒಂಬತ್ತು ರೈತರು ಒಟ್ಟಾಗಿ ಸೇರಿ ಮೂರು ವರ್ಷಗಳಿಂದ ವೀಳ್ಯದೆಲೆ ತೋಟ ಮಾಡಿದ್ದರು.

ಮೈಸೂರು ಸೇರಿದಂತೆ, ಜಿಲ್ಲೆಯ ವರುಣಾ, ತಿ.ನರಸೀಪುರ, ಬನ್ನೂರು ಹಾಗೂ ಬಿಳಿಕೆರೆ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಕಲಬುರ್ಗಿ ನಗರದಲ್ಲಿ ಸಂಜೆ ಧಾರಾಕಾರ ಮಳೆಯಾಯಿತು. ಬೀದರ್ ನಗರ ಸೇರಿದಂತೆ ಜಿಲ್ಲೆಯ ಭಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ಮಳೆಯಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು