ಭಾನುವಾರ, ಅಕ್ಟೋಬರ್ 25, 2020
25 °C

ಮಳೆ, ಗಾಳಿ ಅಬ್ಬರ: ಮೈಸೂರಿನ ಜಯಪುರದಲ್ಲಿ ಧರೆಗುರುಳಿದ ವಿದ್ಯುತ್ ಕಂಬ, ಮರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಹೋಬಳಿಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಡವಾಗಿ ಬಿತ್ತನೆ  ಮಾಡಿರುವ ರೈತರಿಗೆ ವರದಾನವಾದರೆ, ಈಗಾಗಲೇ ರಾಗಿ ಕೊಯ್ಲು ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೀರಿಹುಂಡಿ, ಜಯಪುರ, ಮಾರ್ಬಳ್ಳಿ, ಶ್ರೀರಾಂಪುರ, ಹಾರೋಹಳ್ಳಿ, ಉದ್ಬೂರು, ಮದ್ದೂರು, ದೊಡ್ಡಕಾನ್ಯ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 3.4 ಸೆಂ.ಮೀ ಮಳೆಯಾಗಿದ್ದು ಹಲವೆಡೆ ಭಾರಿ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿವೆ.

ಮಾರ್ಬಳ್ಳಿ ಗ್ರಾಮದಲ್ಲಿ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆ ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಕಷ್ಟ ಕಾಲದಲ್ಲೂ ಬೆಳೆಗಳಿಗೆ ಅಪಾರ  ಹಾನಿಯುಂಟಾಗಿದೆ ಎಂದು ಮಾರ್ಬಳ್ಳಿ ರೈತ ಕುಮಾರ್ ಸಮಸ್ಯೆ ಹೇಳಿದರು.

ಹಿಂಗಾರು ಮಳೆಯ ಅಬ್ಬರಕ್ಕೆ ತೊಗರಿಬೆಳೆ, ಅವರೆ ಮುಂತಾದ ಬೆಳೆಗಳು ಚೇತರಿಕೆ ಪಡೆದುಕೊಂಡಿವೆ. ರೈತರು ಮಳೆಯಾಶ್ರಿತವಾಗಿಯೆ ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಂಡೇಕಾಯಿ, ಬೀನ್ಸ್‌  ಬೀಜಗಳನ್ನು ಹಾಕಿದ್ದಾರೆ.

ಶುಕ್ರವಾರವೂ ಸಂಜೆಯ ವೇಳೆಗೆ ಆರಂಭವಾದ ಮಳೆಯು, ಸತತವಾಗಿ ಸುರಿಯತ್ತಿದ್ದು, ಹಳ್ಳಕೊಳ್ಳಗಳು ತುಂಬಿಕೊಂಡಿದ್ದು, ಜಮೀನುಗಳಲ್ಲಿ ನೀರು ನಿಂತಿದೆ. ಜಯಪುರ ಗ್ರಾಮವೊಂದರ ತೆಂಗಿನ  ಮತ್ತು ಬಾಳೆ ತೋಟಗಳಲ್ಲಿ ಸತತ ಮಳೆಗೆ ನೀರು ನಿಂತು ತೇವಾಂಶ ಹೆಚ್ಚಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.