ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ತಾತ್ಕಾಲಿಕವಾಗಿ ಮುಚ್ಚಿದ ರಮ್ಯ ಮಹೇಂದ್ರ ಹೋಟೆಲ್‌

Last Updated 28 ಜೂನ್ 2020, 15:23 IST
ಅಕ್ಷರ ಗಾತ್ರ

ಮೈಸೂರು: ಕಳೆದ 40 ವರ್ಷಗಳಿಂದ ಸಾಂಸ್ಕೃತಿಕ ನಗರಿಯ ಒಂದು ಭಾಗವೇ ಆಗಿದ್ದ ರಮ್ಯ ಮಹೇಂದ್ರ ಹೋಟೆಲ್ ಕೊರೊನಾ ಸಂಕಷ್ಟದಿಂದ ತಾತ್ಕಾಲಿಕವಾಗಿ ಭಾನುವಾರ ಮುಚ್ಚಿತು. ಕೊರೊನಾ ವೈರಸ್‌ ದೂರವಾದ ನಂತರ ಮತ್ತೆ ವಹಿವಾಟು ನಡೆಸಲಾಗುವುದು ಎಂದು ಇದರ ಮಾಲೀಕ ಮಹೇಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಳಿಗ್ಗೆ 7.30ರಿಂದ 11.30 ಹಾಗೂ ಸಂಜೆ 4.30ರಿಂದ ರಾತ್ರಿ 8ರವರೆಗೆ ಮಾತ್ರ ಕಾರ್ಯನಿರ್ವಹಿಸುವ ಮೂಲಕ ಅತ್ಯಂತ ಶಿಸ್ತುಬದ್ಧವಾದ ಹೋಟೆಲ್ ಎಂಬ ಖ್ಯಾತಿ ಇದಕ್ಕಿತ್ತು. ನಟರಾದ ರಾಜಕುಮಾರ್, ಅಂಬರೀಷ್ ಸೇರಿದಂತೆ ಚಿತ್ರರಂಗದ ಪ್ರಮುಖರು ಹಾಗೂ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪ, ಸಿದ್ದರಾಮಯ್ಯ ಸಹ ಈ ಹೋಟೆಲ್‌ನ ಸಮಯಕ್ಕೆ ತಕ್ಕಂತೆ ಬಂದು ಆಹಾರ ಸೇವಿಸಿ ಹೋಗುತ್ತಿದ್ದುದು ವಿಶೇಷ ಎನಿಸಿತ್ತು.

ಕೊರೊನಾ ಸಂಕಷ್ಟದ ನಂತರ ಇದುವರೆಗೂ ಮೈಸೂರಿನಲ್ಲಿ 25 ಪ್ರಮುಖ ಹೋಟೆಲ್‌ಗಳು ವಹಿವಾಟು ನಿಲ್ಲಿಸಿವೆ. ಕಳೆದ ತಿಂಗಳಲ್ಲಿ ಸದರನ್‌ ಸ್ಟಾರ್ ಹೋಟೆಲ್‌ ಸಹ ಬಾಗಿಲು ಹಾಕಿತ್ತು. ಮತ್ತಷ್ಟು ಹೋಟೆಲ್‌ಗಳು ಇದೇ ಹಾದಿಯಲ್ಲಿದ್ದು, ಸರ್ಕಾರ ತುರ್ತಾಗಿ ಸ್ಪಂದಿಸಬೇಕಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT