ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜೀನ್ಸ್‌ ಪ್ಯಾಂಟ್ ಧರಿಸದಂತೆ ಉಪನ್ಯಾಸಕರಿಗೆ ನಿರ್ಬಂಧ- ಆದೇಶ ವಾಪಸ್

Last Updated 7 ನವೆಂಬರ್ 2021, 8:21 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ವೇಳೆಯಲ್ಲಿ ಜೀನ್ಸ್‌ ಪ್ಯಾಂಟ್‌, ಟೀ–ಷರ್ಟ್‌ ಧರಿಸದಂತೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಾಪಸ್‌ ಪಡೆದಿದ್ದಾರೆ.

‘ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೆ. ಜೊತೆಗೆ ಜಿಲ್ಲಾಧಿಕಾರಿ ಜೊತೆ ಈ ವಾರ ಸಿಇಟಿಗೆ ಸಂಬಂಧಿಸಿದಂತೆ ಸಭೆ ಇತ್ತು. ಆ ಸಭೆಗೆ ಉಪನ್ಯಾಸಕರು ಜೀನ್ಸ್‌ ಪ್ಯಾಂಟ್‌, ಟೀ–ಷರ್ಟ್‌ ಧರಿಸಿಬಂದರೆ ಮುಜುಗರ ಆಗಬಹುದೆಂಬ ಕಾರಣಕ್ಕೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಆದೇಶ ಹೊರಡಿಸಿದ್ದೆ. ಈಗ ಆ ಆದೇಶ ವಾಪಸ್‌ ಪಡೆದಿದ್ದೇನೆ’ ಎಂದು ಡಿಡಿಪಿಯು ಶ್ರೀನಿವಾಸಮೂರ್ತಿ ಭಾನುವಾರ ತಿಳಿಸಿದರು.

‘ಈ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೂಡ ಕರೆ ಮಾಡಿ ವಿಚಾರಿಸಿದರು. ಆದೇಶ ವಾಪಸ್‌ ಪಡೆದಿರುವ ಮಾಹಿತಿಯನ್ನು ಅವರಿಗೂ ನೀಡಿದ್ದೇನೆ’ ಎಂದರು.

ಡಿಡಿಪಿಯು ಹೊರಡಿಸಿದ್ದ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವರು ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT