ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾ: ನಿವೃತ್ತ ಪೊಲೀಸ್‌ ಅಧಿಕಾರಿಯ ಕೃಷಿ ಕಾಯಕ

ನೈಸರ್ಗಿಕ, ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ಮೇಗಳಾಪುರ ಗ್ರಾಮದ ನಾಗಪ್ಪ
Last Updated 1 ನವೆಂಬರ್ 2021, 3:59 IST
ಅಕ್ಷರ ಗಾತ್ರ

ವರುಣಾ: ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಕಮಿಷನರ್‌ ಆಗಿದ್ದ ನಾಗಪ್ಪ ನಿವೃತ್ತಿ ಬಳಿಕ ನೈಸರ್ಗಿಕ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ನಾಗಣ್ಣ ವರುಣಾ ಸಮೀಪದ ಮೇಗಳಾಪುರ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ, ಬಾಳೆ, ಮಾವು, ಪಪ್ಪಾಯ, ಚಕ್ಕೋತ, ಸೀಬೆ, ನುಗ್ಗೆ, ವೀಳ್ಯೆದೆಲೆ, ಕಿತ್ತಳೆ, ಸೀತಾಫಲ, ಹಲಸು ಬೆಳೆದಿ ದ್ದಾರೆ. ಜಾನುವಾರುಗಳ ಮೇವಿಗಾಗಿ ನೇಪಿಯರ್‌ ಹುಲ್ಲು ಬೆಳೆದಿದ್ದಾರೆ.

60ಕ್ಕೂ ಹೆಚ್ಚಿನ ತೆಂಗಿನ ಮರಗಳಿದ್ದು, ವಾರ್ಷಿಕ ₹1.20 ಲಕ್ಷ, ಸಪೋಟ ಬೆಳೆಯಿಂದ ₹60 ಸಾವಿರ, ಪಪ್ಪಾಯದಿಂದ ₹25 ಸಾವಿರ, ಬಾಳೆಯಿಂದ ₹45 ಸಾವಿರ ಆದಾಯ ಗಳಿಸುತ್ತಿದ್ದಾರೆ. ನಾಟಿ ಕೋಳಿ ಹಾಗೂ ಫಾರಂ ಕೋಳಿಗಳಿಂದ ₹2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಹಲಸು, ಕಿತ್ತಳೆ, ಚಕ್ಕೋತ ಸಹ ಬೆಳೆದಿದ್ದಾರೆ.

ಸಾಹಿವಾಲ್‌ ತಳಿಯ ಹಸು ಸಾಕಿದ್ದಾರೆ. ಸಗಣಿ ಹಾಗೂ ಕೋಳಿ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಾರೆ.

ಚಾಮರಾಜನಗರ ಜಿಲ್ಲೆಯ ಯರಗನಹಳ್ಳಿ ಗ್ರಾಮದಲ್ಲಿ ಜನಿಸಿದ ನಾಗಪ್ಪ, ಬಾಲ್ಯದಿಂದಲೇ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದರು. ದನಕರು, ಕುರಿಗಳ ಪಾಲನೆಯಲ್ಲೂ ತೊಡಗಿದ್ದರು.

ಓದಿನಲ್ಲೂ ಮುಂದಿದ್ದ ಅವರು ಪದವಿ ಶಿಕ್ಷಣವನ್ನು ಮುಗಿಸಿ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ, ಪೊಲೀಸ್ ಇಲಾಖೆಗೆ ಸೇರಿದ್ದರು. ಮೈಸೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಎಸಿಪಿಯಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ಆಸಕ್ತ ರೈತರು ನಾಗಪ್ಪ ಅವರ ಮೊಬೈಲ್ ಸಂಖ್ಯೆ 9845443459 ಸಂಪರ್ಕಿಸಬಹುದು.

***

ನಾರಾಯಣರೆಡ್ಡಿ ಅವರ ಪ್ರೇರಣೆಯಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಆದಾಯ ಗಳಿಸುತ್ತಿದ್ದೇನೆ.

–ನಾಗಪ್ಪ, ನೈಸರ್ಗಿಕ ಕೃಷಿಕ

***

ನಾಗಣ್ಣ ಅವರು ಸಮಗ್ರ ಕೃಷಿ ಮೂಲಕ ನಿರಂತರವಾಗಿ ಆದಾಯ ಪಡೆಯುತ್ತಿದ್ದಾರೆ. ಅವರು ಇತರೆ ರೈತರಿಗೆ ಮಾದರಿ

–ಹೇಮಂತ, ವರುಣಾ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT