ಮೈಸೂರು: ಮೈಸೂರಿನ ಎನ್.ಶಿವಮೂರ್ತಿ ನಿರ್ದೇಶಿಸಿರುವ ‘ಬಯೋಡೈವರ್ಸಿಟಿ ಆಫ್ ತ್ರಿಪುರ’ ಸಾಕ್ಷ್ಯಚಿತ್ರವು ಕೇಂದ್ರ ಸರ್ಕಾರದ ವಿಜ್ಞಾನ್ ಪ್ರಸಾರ ಆಯೋಜಿಸಿರುವ 10ನೇ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ತ್ರಿಪುರದ ಅಗರ್ತಲಾದಲ್ಲಿ ನ.24ರಿಂದ 27ರ ವರೆಗೆ ವರ್ಚುವಲ್ ವೇದಿಕೆ ಮೂಲಕ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಮಾನಸ ಗಂಗೋತ್ರಿಯಲ್ಲಿರುವ ಎಜುಕೇಷನಲ್ ಮಲ್ಡಿಮೀಡಿಯಾ ರಿಸರ್ಚ್ ಸೆಂಟರ್ (ಇಎಂಆರ್‌ಸಿ) ವಿಭಾಗದಲ್ಲಿ ಕಿರಿಯ ಸಂಶೋಧನಾಧಿಕಾರಿಆಗಿರುವ ಆ್ಯರನ್ ಮಾರ್ಗದರ್ಶನದಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಎಂಟು ನಿಮಿಷಗಳ ಸಾಕ್ಷ್ಯಚಿತ್ರವು ತ್ರಿಪುರದ ಜೀವವೈವಿಧ್ಯದ ಮೇಲೆ ಬೆಳಕು ಚೆಲ್ಲಿದೆ.

‘ಮೊದಲ ಬಾರಿ ನಿರ್ಮಿಸಿದ ಸಾಕ್ಷ್ಯಚಿತ್ರವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ. 15 ದಿನಗಳಲ್ಲಿ ನಿರ್ಮಿಸಿ ಸ್ಪರ್ಧೆಗೆ ಕಳುಹಿಸಿದ್ದೆ’ ಎಂದು ಶಿವಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.