ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸತ್ಕಾರ

Last Updated 19 ಜೂನ್ 2022, 7:19 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ, ‘ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ’ಯ ಸದಸ್ಯರ ಮಕ್ಕಳನ್ನು ಇಲ್ಲಿನ ತ್ಯಾಗರಾಜ ರಸ್ತೆಯ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸತ್ಕರಿಸಲಾಯಿತು.

ಸದಸ್ಯರ ಮಕ್ಕಳಾದ ನಗರದ ಧರಂಸಿಂಗ್ ಕಾಲೊನಿಯ ಚೇತನಾ (596), ಭರತ್‌ನಗರದ ಸಿಂಚನಾ (593), ಹಂಚ್ಯಾ ಗ್ರಾಮದ ನಿಖಿಲ್‌ಕುಮಾರ್ (585), ಹೆಬ್ಬಾಳ ಕಾಲೊನಿಯ ಹರ್ಷಿತಾ ಬಿ. (578), ಹುಣಸೂರಿನ ಹರ್ಷಿತಾ ಎಚ್‌.ಎಂ. (568), ಗಾಂಧಿ ನಗರದ ಶ್ರೀದೇವಿ (552), ಕೆ.ಆರ್. ನಗರದ ಪೂರ್ಣಿಮಾ (532), ಹೆಬ್ಬಾಳ ಕಾಲೊನಿಯ ಯಶವಂತ್ (531) ಹಾಗೂ ವಂದನಾ ಬಿ. (520), ಕೆ.ಆರ್. ನಗರದ ಗಾನವಿ ಕೆ. (505), ಧರಂಸಿಂಗ್ ಕಾಲೊನಿಯ ವರ್ಷಿತಾ ಎಂ. (505) ಅವರನ್ನು ಪದಾಧಿಕಾರಿಗಳು ಸನ್ಮಾನಿಸಿದರು.

ಸಮಿತಿಯ ಗೌರವಾಧ್ಯಕ್ಷ ಕಾಂಕ್ರೀಟ್ ರಾಜಣ್ಣ, ಅಧ್ಯಕ್ಷ ಎಂ.ಕೆ. ಮಹದೇವ, ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರ ಮತ್ತು ಪದಾಧಿಕಾರಿಗಳು, ಪೋಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT