ಶುಕ್ರವಾರ, ಅಕ್ಟೋಬರ್ 23, 2020
27 °C

ಮೃಗಾಲಯಕ್ಕೆ ಸುಧಾಮೂರ್ತಿ ಮತ್ತೆ ₹ 20 ಲಕ್ಷ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇನ್ಫೊಸಿಸ್ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳ ಪಾಲನೆ- ಪೋಷಣೆಗಾಗಿ ಮತ್ತೆ ₹ 20 ಲಕ್ಷ ದೇಣಿಗೆ ನೀಡಿದ್ದಾರೆ.

‘ಈ ಹಿಂದೆ ಕೋವಿಡ್‌ನಿಂದ ಮೃಗಾಲಯ ಮುಚ್ಚಿದ್ದ ಅವಧಿಯಲ್ಲಿ, ಸುಧಾಮೂರ್ತಿ ಅವರು ₹ 20 ಲಕ್ಷ ನೀಡಿದ್ದರು. ಮೃಗಾಲಯದ ಬಗ್ಗೆ ಅವರಿಗಿರುವ ಅಭಿಮಾನ, ಕಾಳಜಿಯನ್ನು ಅಭಿನಂದಿಸುತ್ತೇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದತ್ತು ಸ್ವೀಕಾರ: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಯಶ್ಮಿಕ ಎಂಬವರು ₹ 1.75 ಲಕ್ಷ ಪಾವತಿಸಿ ‘ಏಷ್ಯಾಟಿಕ್ ಆನೆ’ಯನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು