ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಾತ್ರೆಯೊಂದಿಗೆ ಜನಜಾಗೃತಿ ಯಾತ್ರೆ

ಜ.21ರಿಂದ 26ರವರೆಗೆ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ
Last Updated 18 ಜನವರಿ 2020, 10:39 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಹೋತ್ಸವದ ಸಿದ್ಧತೆ ಭರದಿಂದ ಸಾಗಿದೆ.

ಜನವರಿ 21ರಿಂದ 26ರವರೆಗೆ ನಡೆಯುವ ಈ ಜಾತ್ರೆಯು ವೀರಭದ್ರೇಶ್ವರ ಕೊಂಡೋತ್ಸವದೊಂದಿಗೆ ಆರಂಭಗೊಳ್ಳಲಿದೆ. 22ರಂದು ಕರ್ತೃ ಗದ್ದುಗೆಯಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮವೂ ನಡೆಯಲಿದೆ. ರಾಜ್ಯಮಟ್ಟದ ಭಜನೆ ಮತ್ತು ಏಕತಾರಿ ಸ್ಪರ್ಧೆಯೂ ಇರಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯ ದರ್ಶಿ ಮಂಜುನಾಥಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

23ರಂದು ಬೆಳಿಗ್ಗೆ 10.30ರಿಂದ ರಥೋತ್ಸವ ನಡೆಯಲಿದ್ದು, 11.15ರಿಂದ ಧಾರ್ಮಿಕ ಸಭಾ ಕಾರ್ಯ ಕ್ರಮ, ಸಂಜೆ 4ಕ್ಕೆ 52ನೇ ದನಗಳ ಜಾತ್ರೆ ನಡೆಯಲಿದೆ. 24ರಂದು ಬೆಳಿಗ್ಗೆ 10.30ಕ್ಕೆ ಸಾವಯವ ಕೃಷಿ ಮತ್ತು ಜಲ ವೈಜ್ಞಾನಿಕ ಬಳಕೆ ಕುರಿತ ಕೃಷಿ ವಿಚಾರಸಂಕಿರಣ, ಗಾಳಿಪಟ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಮೈಸೂರಿನ ವಿವಿಧ ಮಹಿಳಾ ಬಳಗಗಳಿಂದ ಮಹಾತ್ಮ ಗಾಂಧಿ ಬದುಕು ಮತ್ತು ಸಂದೇಶ ಕುರಿತ ರಸಪ್ರಶ್ನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

25ರಂದು ಬೆಳಿಗ್ಗೆ 10.30ಕ್ಕೆ ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆ ಹಾಗೂ ಭಜನಾ ಮೇಳದ ಸಮಾರೋಪ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಸುತ್ತೂರು ಮಠದ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಮಧ್ಯಾಹ್ನ 2ರಿಂದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಈ ಬಾರಿ ಎರಡು ಮಾರ್ಫಿಟ್‌ ಕುಸ್ತಿಗಳಿರಲಿವೆ. ವಿಜೇತರಿಗೆ ಸುತ್ತೂರುಕೇಸರಿ ಪ್ರಶಸ್ತಿ, ಸುತ್ತೂರು ಕುಮಾರ ಪ್ರಶಸ್ತಿ ನೀಡಲಾ ಗುವುದು. ಸಂಜೆ 5ರಿಂದ ಸಾಂಸ್ಕೃತಿಕ ಮೇಳಹಾಗೂ ದನಗಳ ಜಾತ್ರೆಯ ಸಮಾ ರೋಪ, ರಾತ್ರಿ 9ರಿಂದ ತೆಪ್ಪೋತ್ಸವ ನಡೆಯಲಿದೆ.

26ರಂದು ಬೆಳಿಗ್ಗೆ 6.30ಕ್ಕೆ ಸುತ್ತೂರು ಜೆಎಸ್‌ಎಸ್‌ ಶಾಲೆಗಳ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಲಿದೆ. ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ವತಿಯಿಂದ ಬೆಳಿಗ್ಗೆ8ಕ್ಕೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಬೆಳಿಗ್ಗೆ 10.30ಕ್ಕೆ ಕೃಷಿ ಮೇಳ ಮತ್ತು ವಸ್ತುಪ್ರದರ್ಶನದ ಸಮಾರೋಪ ನಡೆಯಲಿದೆ ಎಂದು ವಿವರಿಸಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿ, ಸಚಿವರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕೃಷಿ ಮೇಳ: ಕೃಷಿ ಮೇಳದಲ್ಲಿ ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯ ಬೆಳೆಗಳ ಪ್ರಾತ್ಯಕ್ಷಿಕೆಯೂ ಇರಲಿದೆ.ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ, ಹನಿ ನೀರಾವರಿಯಲ್ಲಿ ಭತ್ತ ಬೆಳೆಯುವ ಪ್ರಾತ್ಯಕ್ಷಿಕೆ ಇದೆ.

ಕೃಷಿ ಬ್ರಹ್ಮಾಂಡ: ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ ಪ್ರದರ್ಶನ, ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನ, ಹಸು, ಕುರಿ, ಮೇಕೆ, ಕೋಳಿಗಳ ದೇಸಿ ತಳಿಗಳ ಪ್ರದರ್ಶನವೂ ಇರಲಿದೆ. ಕೃಷಿ ಬ್ರಹ್ಮಾಂಡದಲ್ಲಿ 117 ಬಗೆಯ ಬೆಳೆ
ಗಳನ್ನು ಬೆಳೆಯಲಾಗಿದೆ.ಪಾರಂಪರಿಕ ಬೆಳೆಗಳು, ವಿದೇಶಿ ತರಕಾರಿಗಳು, ಚೆರ್ರಿ ಟೊಮೆಟೊ ಪ್ರದರ್ಶನವೂ ಇದೆ. 20 ಪ್ರಭೇದಗಳ ಪುಷ್ಪ ತೋಟ, ಸಾವಯವ ತರಕಾರಿಯೂ ಇದೆ.

ಜಾತ್ರಾ ಸಮಿತಿ ಸಂಚಾಲಕರಾದ ಶಿವಕುಮಾರಸ್ವಾಮಿ, ಉದಯಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT