ಶುಕ್ರವಾರ, ಆಗಸ್ಟ್ 14, 2020
28 °C
ಲಾಲ್‌ಬಹದ್ದೂರ್‌ಶಾಸ್ತ್ರಿ ಬದುಕಿದ್ದರೆ ಭಾರತದ ಇತಿಹಾಸವೇ ಬದಲಾಗುತ್ತಿತ್ತು– ಎಸ್.ಎಲ್‌.ಭೈರಪ್ಪ

‘ತಾಷ್ಕೆಂಟ್ ಡೈರಿ’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಲೇಖಕ ಎಸ್‌.ಉಮೇಶ್‌ ಅವರ ಲಾಲ್‌ಬಹದ್ದೂರ್‌ಶಾಸ್ತ್ರಿ ಬದುಕಿನ ಕುರಿತಾದ ‘ತಾಷ್ಕಂಟ್ ಡೈರಿ’ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಲಾಲ್‌ಬಹದ್ದೂರ್‌ಶಾಸ್ತ್ರಿ ಬದುಕಿದ್ದರೆ ಭಾರತದ ಇತಿಹಾಸದ ಸ್ವರೂಪವೇ ಬದಲಾಗುತ್ತಿತ್ತು’ ಎಂದು ಹೇಳಿದರು.

ಭಾರತಕ್ಕೆ ಕ್ಷೀರಕ್ರಾಂತಿ ಅಗತ್ಯ ಎಂದು ಅರಿತು, ಅವರು ಅದರ ಜವಾಬ್ದಾರಿಯನ್ನು ಕುರಿಯನ್ ಅವರಿಗೆ ವಹಿಸಿದರು. ಅವರ ಸರಳತೆ ಮೆಚ್ಚುವಂತದ್ದಾಗಿತ್ತು ಎಂದು ತಿಳಿಸಿದರು.

ಬನಾರಸ್‌ನಲ್ಲಿ ವಾಸವಿದ್ದಾಗ ತಾವು ಶಾಸ್ತ್ರಿ ಅವರ ಮನೆಗೆ ಭೇಟಿ ಕೊಟ್ಟ ಪ್ರಸಂಗಗಳನ್ನು ನೆನಪು ಮಾಡಿಕೊಂಡರು.

ಧಾತ್ರಿ ಪ್ರಕಾಶನದ ಮುಖ್ಯಸ್ಥರಾದ ಬೃಂದಾ ಉಮೇಶ್ ಮಾತನಾಡಿ, ‘ಮೊದಲ ಮುದ್ರಣದ ಬಹುತೇಕ ಎಲ್ಲ ಪ್ರತಿಗಳನ್ನು ಓದುಗರು ಕಾಯ್ದಿರಿಸಿದ್ದಾರೆ. ಈಗ ಅದನ್ನು ಅವರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು. 

ಸಾಹಿತಿ ಪ್ರಧಾನ ಗುರುದತ್‌ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು