ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ| ದುಬಾರಿಯಾದ ಮೊಟ್ಟೆ, ನಿಯಂತ್ರಣಕ್ಕೆ ಬಾರದ ಬೀನ್ಸ್

ಅತಿ ವೇಗವಾಗಿ ಹೆಚ್ಚಿದ ಕೋಳಿಮೊಟ್ಟೆ ದರ
Last Updated 9 ಜೂನ್ 2020, 7:01 IST
ಅಕ್ಷರ ಗಾತ್ರ

ಮೈಸೂರು: ಜೂನ್ 1ರಿಂದ ಸೋಮವಾರದವರೆಗೂ ಕೋಳಿಮೊಟ್ಟೆ ದರ ಹೆಚ್ಚಾಗುತ್ತಲೇ ಇದ್ದು, ಪೌಲ್ಟ್ರಿ ಫಾರಂ ಮಾಲೀಕರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಆದರೆ, ಇದು ಸುಸ್ಥಿರವಾದ ಬೆಲೆ ಏರಿಕೆಯಲ್ಲ, ಹೆಚ್ಚು ದಿನ ಈ ಏರಿಕೆಗತಿ ಉಳಿಯದು ಎಂಬ ವಿಶ್ಲೇಷಣೆಯೂ ನಡೆದಿದೆ.

ಕೊರೊನಾ ಸಂಕಷ್ಟ ಆರಂಭವಾದ ಮೇಲೆ ಹಿನ್ನಡೆ ಅನುಭವಿಸಿದ್ದ ಕುಕ್ಕುಟ್ಟೋದ್ಯಮ ನಂತರ ಹಕ್ಕಿಜ್ವರದಿಂದ ಹೈರಣಾಗಿತ್ತು. ಹಲವು ಮಂದಿ ತಮ್ಮ ತಮ್ಮ ಪೌಲ್ಟ್ರಿ ಫಾರಂಗಳನ್ನು ಮುಚ್ಚಿದ್ದರು. ಕೋಳಿ ಮೊಟ್ಟೆ ದರ ಮಕಾಡೆ ಮಲಗಿತ್ತು. ಇಡೀ ಕ್ಷೇತ್ರವೇ ಇತಿಹಾಸದಲ್ಲಿ ಎಂದೂ ಕಾಣದ ರೀತಿಯಲ್ಲಿ ಕಳೆಗುಂದಿತ್ತು.

ಈಗ ದಿಢೀರನೇ ದರ ಹೆಚ್ಚಾಗುತ್ತಿರುವುದು ನಿಜಕ್ಕೂ ಕುಕ್ಕುಟ್ಟೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಸಂತಸ ತಂದಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಜೂನ್ 1ರಂದು ಒಂದು ಮೊಟ್ಟೆಗೆ ₹ 3.68 ಇತ್ತು. ಸೋಮವಾರ ಇದರ ದರ ₹ 4.55ಕ್ಕೆ ಏರಿಕೆ ಕಂಡಿದೆ. 87 ಪೈಸೆಯಷ್ಟು ಕೇವಲ 8 ದಿನಗಳಲ್ಲಿ ಏರಿಕೆಯಾಗಿದೆ.

ಮೊಟ್ಟೆ ಉತ್ಪಾದನೆ ಶೇ 15ರಿಂದ 20ರಷ್ಟು ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಒಂದು ಕಾರಣವಾದರೆ, ಪಂಜಾಬಿನಲ್ಲಿ ದಿಢೀರನೇ ಹೆಚ್ಚಿದ ಬೇಡಿಕೆ ಮತ್ತೊಂದು ಕಾರಣವಾಗಿದೆ. ಆದರೆ, ಇದು ಕೃತಕ ಬೇಡಿಕೆಯೊ ಅಥವಾ ನೈಜ ಬೇಡಿಕೆಯೊ ಎಂಬುದು ಸ್ಪಷ್ಟವಾಗದ ಕಾರಣ ಕುಕ್ಕುಟ್ಟೋದ್ಯಮ ಕ್ಷೇತ್ರವು ಗೊಂದಲದಲ್ಲಿದೆ.

ಇಳಿಯದ ಬೀನ್ಸ್, ದಪ್ಪಮೆಣಸಿನಕಾಯಿ ದರ

ಬೀನ್ಸ್ ಮತ್ತು ದಪ್ಪಮೆಣಸಿನಕಾಯಿ ದರವು ಈ ಬಾರಿ ಇಳಿಕೆಯಾಗಿಲ್ಲ. ಕೆ.ಜಿಗೆ ₹ 10ರ ದರದಲ್ಲೇ ಟೊಮೆಟೊ ಮಾರಾಟವಾಗಿದ್ದರೆ, ಬೀನ್ಸ್ ಕೆ.ಜಿಗೆ ₹ 47ರ ದರ ನಿಗದಿಯಾಗಿತ್ತು. ಹೂಕೋಸು ₹ 14ಕ್ಕೆ ಮಾರಾಟವಾಗಿದ್ದರೆ, ಎಲೆಕೋಸು ₹ 7ನ್ನು ತಲುಪಿತ್ತು.

ಚೇತರಿಕೆ ಪಡೆದ ಸಿಹಿಗುಂಬಳ, ಮಂಗಳೂರು ಸೌತೆ

ಬೆಲೆ ಇಳಿಕೆಯಿಂದ ತತ್ತರಿಸಿದ ಸಿಹಿಗುಂಬಳ ಮತ್ತು ಮಂಗಳೂರು ಸೌತೆ ಬೆಳೆಗಾರರು ಕೊಂಚ ನಿರಾಳರಾಗಿದ್ದಾರೆ. ಸಿಹಿಗುಂಬಳವು ಕೆ.ಜಿಗೆ ₹ 4ನ್ನು ತಲುಪಿದ್ದರೆ, ಮಂಗಳೂರು ಸೌತೆ ಕೆ.ಜಿಗೆ ₹ 3ನ್ನು ತಲುಪಿದೆ.

ದುಬಾರಿಯಾದ ಹಸಿರು ಮೆಣಸಿನಕಾಯಿ

ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದ ಹಸಿಮೆಣಸಿನಕಾಯಿ ಇಳುವರಿ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿದೆ. ಇದರಿಂದ ಆವಕ ಕಡಿಮೆಯಾಗಿ ಬೆಲೆಯು ಕೆ.ಜಿಗೆ ₹ 25ಕ್ಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT