ಶನಿವಾರ, ಏಪ್ರಿಲ್ 4, 2020
19 °C

ಮೈಸೂರು | ತರಕಾರಿ ಮಾರುಕಟ್ಟೆಯ ಸಮಯ‌ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೊರೊನಾ ವೈರಸ್ ಹರಡುವಿಕೆ ತಡೆಗಾಗಿ ಇಲ್ಲಿನ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆಗೆ ಸಮಯದ ಮಿತಿ ಹೇರಲಾಗಿದೆ.

ಮುಂಜಾನೆಯ 4.30 ರಿಂದ ಬೆಳಿಗ್ಗೆ‌ 8.30ರವರೆಗೆ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ನಿತ್ಯ‌ ನೂರಾರು ಮಂದಿ‌ ಸೇರುತ್ತಿದ್ದರು. ಕೊರೊನಾ‌ ಸೋಂಕು ಹರಡಬಹುದಾದ ಸಾಧ್ಯತೆ ಇರುವುದರಿಂದ ಮಾರಾಟದ ಸಮಯವನ್ನು ಕಡಿತಗೊಳಿಸಲಾಗಿದೆ. 8.30ರ ನಂತರವೂ ಇದ್ದ ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಬುಧವಾರ ಪೊಲೀಸರು ಚದುರಿಸಿದರು.

ಪಾಲಿಕೆಯ ಆರೋಗ್ಯ ವಿಭಾಗದ ತಂಡವು ಹೋಂ ಕ್ವಾರೆಟೈನ್ ಗೆ ಒಳಗಾದವರ ಮನೆಗೆ ನಿತ್ಯ ಭೇಟಿ‌ ನೀಡುವ ಮೂಲಕ ನಿಗಾ ವಹಿಸಿದೆ. ನಗರದಲ್ಲಿ ಜನರ ಓಡಾಟವನ್ನು ಪೊಲೀಸರು ಎಚ್ಚರಿಕೆ ನೀಡುವ ಮೂಲಕ ನಿರ್ಬಂಧಿಸುತ್ತಿದ್ದಾರೆ. ಸೂಪರ್ ಮಾರ್ಕೆಟ್ ಗಳಲ್ಲಿ ಗ್ರಾಹಕರು ಅಂತರ ಕಾಯ್ದಕೊಳ್ಳುವಂತೆ ಸೂಚನೆ ನೀಡಲಾಗಿದೆ.

ತಿ.ನರಸೀಪುರದ ಕಾವೇರಿ ನದಿಯಲ್ಲಿ ಯುಗಾದಿ ಪ್ರಯುಕ್ತ ಪವಿತ್ರ ಸ್ನಾನ ಮಾಡುವ ವಾಡಿಕೆ ಇದೆ. ಇದನ್ನು ತಡೆಯಲು ಪೊಲೀಸರು ಕಣ್ಗಾವಲು ಇರಿಸಿದ್ದು, ನದಿ ತೀರಕ್ಕೆ ಯಾರನ್ನೂ ಬಿಡುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು