ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ, ಹಸಿಮೆಣಸಿನಕಾಯಿ ದುಬಾರಿ

ಬದನೆ, ಸೋರೆ, ಎಲೆಕೋಸು, ಸಿಹಿಗುಂಬಳದ ಧಾರಣೆ ಇಳಿಮುಖ
Last Updated 13 ಜುಲೈ 2020, 18:42 IST
ಅಕ್ಷರ ಗಾತ್ರ

ಮೈಸೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಈ ವಾರ ಮತ್ತೆ ಏರಿಕೆ ಹಾದಿಗೆ ಹೊರಳಿದೆ. ಕಳೆದ ವಾರ ಸಗಟು ಧಾರಣೆ ದರ 1 ಕೆ.ಜಿ.ಗೆ ₹ 23 ಇದ್ದದ್ದು, ಸೋಮವಾರ ₹ 28ಕ್ಕೆ ಏರಿಕೆಯಾಗಿದೆ.

ಮಾರುಕಟ್ಟೆಗೆ ಟೊಮೆಟೊ ಆವಕ ಹೆಚ್ಚುತ್ತಲೇ ಇದೆ. ಭಾನುವಾರ 1,350 ಕ್ವಿಂಟಲ್‌ ಬಂದಿದ್ದರೆ, ಸೋಮವಾರ 790 ಕ್ವಿಂಟಲ್‌ ಆವಕವಾಗಿದೆ. ಉಳಿದ ತರಕಾರಿಗಿಂತಲೂ ಹೆಚ್ಚಿಗೆ ಬಂದಿದ್ದರೂ, ಕೇರಳ ವರ್ತಕರಿಂದ ಬೇಡಿಕೆ ಹೆಚ್ಚುತ್ತಿರುವುದರಿಂದ ಬೆಲೆಯೂ ಹೆಚ್ಚುತ್ತಿದೆ ಎಂದು ತರಕಾರಿ ವ್ಯಾಪಾರಿ ಕೃಷ್ಣ ತಿಳಿಸಿದರು.

ಹಸಿಮೆಣಸಿನಕಾಯಿ ದರವೂ ಹೆಚ್ಚುತ್ತಿದೆ. ತಿಂಗಳ ಆರಂಭದಲ್ಲಿ ಕೆ.ಜಿ.ಗೆ ₹ 20 ಇತ್ತು. ಈಗ ₹ 27 ಆಗಿದೆ. 13 ದಿನದಲ್ಲಿ ₹ 7 ದುಬಾರಿಯಾಗಿದೆ. ಇದು ಗ್ರಾಹಕರ ಜೇಬಿಗೆ ಹೊರೆಯಾದರೆ, ಬೆಳೆಗಾರರಿಗೆ ಖುಷಿಯ ವಿಷಯವಾಗಿದೆ.

ದಪ್ಪ ಮೆಣಸಿನಕಾಯಿಯ ದರವೂ ದುಬಾರಿಯಾಗುತ್ತಿದೆ. ಹಿಂದಿನ ವಾರ ಸಗಟು ಧಾರಣೆ ಕೆ.ಜಿ.ಗೆ ₹ 53 ಇದ್ದದ್ದು, ಸೋಮವಾರ ₹ 67ಕ್ಕೆ ತಲುಪಿದೆ. ಒಂದೇ ವಾರಕ್ಕೆ ₹ 14 ಹೆಚ್ಚಾಗಿದೆ. ‘ಹಾಪ್‌ಕಾಮ್ಸ್‌’ನಲ್ಲಿ ₹ 84 ಇದೆ.

ಚೇತರಿಕೆಯಿಲ್ಲ: ಬದನೆ, ಸೋರೆಕಾಯಿ, ಸಿಹಿಗುಂಬಳ, ಎಲೆಕೋಸಿನ ದರಗಳು ಈ ವಾರವೂ ಚೇತರಿಕೆ ಕಂಡಿಲ್ಲ. 1 ಕೆ.ಜಿ.ಗೆ ಗರಿಷ್ಠ ಧಾರಣೆ ₹ 5–6ರಲ್ಲೇ ಮುಂದುವರೆದಿದೆ. ₹ 15 ಇದ್ದ ಬೀನ್ಸ್ ಸಗಟು ಬೆಲೆ ₹ 18ಕ್ಕೆ ಏರಿಕೆಯಾಗಿದೆ.

ಬಾಳೆಹಣ್ಣಿನ ದರ ಕೆ.ಜಿ.ಗೆ ₹ 50ರ ಆಸುಪಾಸಿನಲ್ಲೇ ಇದೆ. ಪಚ್ಚಬಾಳೆ ₹ 20. ಮಾವಿನ ಸೀಝನ್‌ ಮುಗಿದಿದ್ದು ಆವಕವೂ ಕ್ಷೀಣಿಸುತ್ತಿದೆ. ನೀಲಂ, ಮಲಗೋವಾ, ತೋತಾಪುರಿ ಮಾತ್ರವೇ ಸಿಗುತ್ತಿದೆ. ರಸಪೂರಿ, ಬಾದಾಮಿ ಮಾವಿನಹಣ್ಣುಗಳ ಆವಕ ತೀರಾ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT