ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಾಳೆಯಿಂದ ಚಳಿಗಾಲದ ರೇಸ್‌

ಮೈಸೂರು ರೇಸ್‌ ಕ್ಲಬ್‌: ಈ ಬಾರಿ ಆರು ರೇಸ್‌ ದಿನಗಳ ಆಯೋಜನೆ
Last Updated 10 ನವೆಂಬರ್ 2020, 5:08 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ರೇಸ್‌ ಕ್ಲಬ್‌ ವತಿಯಿಂದ ಈ ಋತುವಿನ ಚಳಿಗಾಲದ ರೇಸ್‌ಗಳನ್ನು ನ.11 ರಿಂದ ಆರಂಭಿಸಲಾಗುವುದು ಎಂದು ಮೈಸೂರು ರೇಸ್‌ ಕ್ಲಬ್‌ ಅಧ್ಯಕ್ಷ ಡಾ.ಎನ್‌.ನಿತ್ಯಾನಂದ ರಾವ್‌ ತಿಳಿಸಿದರು.

ಕೋವಿಡ್‌ನಿಂದಾಗಿ ಹಲವು ದಿನಗಳ ಬಳಿಕ ರೇಸ್‌ ಕ್ಲಬ್‌ನಲ್ಲಿ ರೇಸಿಂಗ್‌ ಚಟುವಟಿಕೆ ನಡೆಯಲಿದೆ. ಈ ಬಾರಿಯ ಚಳಿಗಾಲದ ರೇಸ್‌ನಲ್ಲಿ ಒಟ್ಟು ಆರು ರೇಸಿಂಗ್‌ ದಿನಗಳನ್ನು ಆಯೋಜಿಸಲಾಗಿದೆ. ನ.11, ನ.18, ನ.25, ಡಿ.2, ಡಿ.9 ಮತ್ತು ಡಿ.16 ರಂದು ರೇಸ್‌ಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೇಸಿಂಗ್‌ ಟ್ರ್ಯಾಕ್‌ಗಳನ್ನು ಸಿದ್ಧಗೊಳಿಸಲಾಗಿದೆ. ಸ್ಟೇಕ್ಸ್‌ ರೂಪದಲ್ಲಿ ₹70.20 ಲಕ್ಷ ಮೀಸಲಿಡಲಾಗಿದೆ. ಚಳಿಗಾಲದ ರೇಸ್‌ಗಳಲ್ಲಿ 400 ಕುದುರೆಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

‘ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ರೇಸ್‌ ಕ್ಲಬ್‌ ಸಿಬ್ಬಂದಿ, ಕುದುರೆ ಮಾಲೀಕರು, ಜಾಕಿಗಳು, ತರಬೇತುದಾರರು ಮತ್ತು ಅಧಿಕಾರಿಗಳು ಒಳಗೊಂಡಂತೆ 200 ಮಂದಿಗೆ ಮಾತ್ರ ಪ್ರವೇಶ ಇರಲಿದೆ. ಪ್ರೇಕ್ಷಕರಿಗೆ ಅವಕಾಶ ಇಲ್ಲ’ ಎಂದರು.

ಬೆಟ್ಟಿಂಗ್‌ ನಡೆಸುವವರಿಗೆ ಅನುಕೂಲವಾಗಲು ಮೈಸೂರು ರೇಸ್‌ ಕ್ಲಬ್‌ ದೇಶದಲ್ಲೇ ಮೊದಲ ಬಾರಿಗೆ ಆನ್‌ಲೈನ್‌ ಬೆಟ್ಟಿಂಗ್‌ ಪೋರ್ಟಲ್‌ ಆರಂಭಿಸಿದೆ. ಇನ್ನು ಮುಂದೆ ಆನ್‌ಲೈನ್‌ ಮೂಲಕವೂ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

₹ 3.5 ಕೋಟಿ ನಷ್ಟ: ರೇಸ್‌ ಕ್ಲಬ್‌ನಲ್ಲಿ ಮಾರ್ಚ್‌ 16 ರಂದು ಕೊನೆಯದಾಗಿ ರೇಸ್‌ ನಡೆದಿತ್ತು. ಆ ಬಳಿಕ ಕೋವಿಡ್‌ ಕಾರಣ ಹಲವು ತಿಂಗಳು ಮುಚ್ಚಲಾಗಿತ್ತು. ಇದರಿಂದ ಸುಮಾರು ₹ 3 ರಿಂದ 3.5 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದರು.

ರೇಸ್‌ ಕ್ಲಬ್‌ ಕಾರ್ಯದರ್ಶಿ ಡಾ.ಎಂ.ಆರ್‌.ಜಗನ್ನಾಥ್, ಸಮಿತಿ ಸದಸ್ಯರಾದ ಎಚ್‌.ಕೆ.ರಮೇಶ್. ಬಿ.ಎನ್‌.ಕಾರ್ಯಪ್ಪ, ಎಂ.ಸಿ.ಮಲ್ಲಿಕಾರ್ಜುನ್, ಸ್ಟೀವರ್ಡ್‌ಗಳಾದ ವೈ.ಪಿ.ಉದಯಶಂಕರ್, ಟಿ.ಡಿ.ಮಹೇಶ್, ಬಿ.ಯು.ಚೆಂಗಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT