ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಹೊಸಹಳ್ಳಿ ವಿವೇಕ ಗಿರಿಜನ ಶಿಕ್ಷಣ ಕೇಂದ್ರದಲ್ಲಿ ಸೆ.2ರಿಂದ 6ರವರೆಗೆ ರಾಜ್ಯ ಮಟ್ಟದ ‘ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿ ಶಿಬಿರ’ ನಡೆಯಲಿದೆ.

‘ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ನಡೆಯುವ ಶಿಬಿರವನ್ನು ಡಾ.ಆರ್. ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ್ ಕುಮಾರ್ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2ರಂದು ‘ಬುಡಕಟ್ಟು ಸಮುದಾಯ

ಸ್ವರೂಪ, ಲಕ್ಷಣ’ ಕುರಿತು ಡಾ.ಹಿ.ಚಿ.ಬೋರಲಿಂಗಯ್ಯ, ‘ಬುಡಕಟ್ಟು ಅಧ್ಯಯನ ಮತ್ತು ಸಂಶೋಧನೆ’– ಡಾ.ನಾಗ.ಎಚ್.ಹುಬ್ಳಿ, ಕರ್ನಾಟಕ ಬುಡಕಟ್ಟುಗಳು ಕುರಿತು ಡಾ. ನಾಗೇಶ ಹೆಬ್ಬಾಳೆ ಮಾತನಾಡಲಿದ್ದಾರೆ ಎಂದು ಹೇಳಿದರು.

3ರಂದು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಪಿ.ಪಿ.ತಮ್ಮಯ್ಯ ಅವರು ತರಬೇತಿ ನೀಡ
ಲಿದ್ದು, ಡಾ.ಮಾಧವ ಪೆರಾಜೆ (ಕನ್ನಡ, ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ), ಡಾ.ಎಸ್.ಎಂ.ಮುತ್ತಯ್ಯ (ಬುಡಕಟ್ಟು ಸಾಹಿತ್ಯ ಮತ್ತು ಆಶಯ, ಅಭಿವ್ಯಕ್ತಿ), ಡಾ.ಕೃಷ್ಣಮೂರ್ತಿ ಹನೂರು (ಬುಡ
ಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ ), ಕುರುವ ಬಸವರಾಜ್ (ಬುಡಕಟ್ಟು ಸಂಸ್ಕೃತಿ ಆಚರಣೆ ಪರಂಪರೆ), ಕೆ.ಭಾಸ್ಕರ್ ದಾಸ್ ಎಕ್ಕಾರು (ಬುಡಕಟ್ಟು ಅಭಿವೃದ್ದಿ: ಸಂಘಸಂಸ್ಥೆಗಳ ಪಾತ್ರ) ಮಾತನಾಡಲಿದ್ದಾರೆ ಎಂದರು.

4ರಂದು ಡಾ.ಎಚ್.ಪಿ.ಜ್ಯೋತಿ (ಬುಡಕಟ್ಟು ಮಹಿಳೆ), ಡಾ.ಪಿ.ಕೆ. ಖಂಡೋಬ (ಬುಡಕಟ್ಟು ಭಾಷೆಗಳು: ಸ್ಥಿತ್ಯಂತರ), ಡಾ.ಮೀರಾಸಾಬಿಹಳ್ಳಿ ಶಿವಣ್ಣ (ಬುಡಕಟ್ಟು ಮಹಾಕಾವ್ಯ: ಸಾಂಸ್ಕೃತಿಕ ನಾಯಕ), ಪ್ರೊ.ಟಿ.ಟಿ.ಬಸವನಗೌಡ (ಬುಡಕಟ್ಟು ಯೋಜನೆ), ಸಂತೋಷ್ ತಮ್ಮಯ್ಯ (ಸ್ವಾತಂತ್ರ್ಯ ಹೋರಾಟ), 5ರಂದು ಮೈಸೂರು ಉಮೇಶ್ (ಬುಡಕಟ್ಟು ಮತ್ತು ಸಮೂಹ ಮಾಧ್ಯಮ), ಡಾ.ಎಂ.ಆರ್.ಸೀತಾರಾಂ (ಜೀವನ ಮೌಲ್ಯ), ವಾದಿರಾಜ (ಸಾಮಾಜಿಕ ಸಾಮರಸ್ಯ) ವಿಚಾರ ಮಂಡಿಸಲಿದ್ದಾರೆ ಎಂದರು.

ಶಿಬಿರದ ಸಮಾರೋಪ 6ರಂದು ನಡೆಯಲಿದ್ದು, ಕವಿಗೋಷ್ಠಿ, ಕಥಾಗೋಷ್ಠಿ ಏರ್ಪಡಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಡಾ.ಎಲ್.ಗೋಮತಿದೇವಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ. ರೇಖಾ ಷಣ್ಮುಖ, ಶಿಬಿರದ ಸಂಚಾಲಕ ಡಾ. ಪಿ.ಎಂ.ಕುಮಾರ್, ಗಿರಿಜನ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.