ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರಿಂದ ಉಳಿಯಿತು 14 ಮಂದಿಯ ಜೀವ

ಅಂಗಾಂಗಳ ದಾನ; ಸಾವಿನಲ್ಲೂ ಸಾರ್ಥಕತೆ
Last Updated 20 ಆಗಸ್ಟ್ 2021, 2:14 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಅಪೊಲೊ ಬಿಜಿಎಸ್‌ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗಾಂಗಗಳನ್ನು 14 ಮಂದಿಗೆ ದಾನ ಮಾಡುವ ಮೂಲಕ ಸಂಬಂಧಿಕರು ಸಾರ್ಥಕತೆ ಮೆರೆದಿದ್ದಾರೆ. ಮೂತ್ರಪಿಂಡ, ಕಾರ್ನಿಯಾ, ಹೃದಯದ ವಾಲ್ವ್‌ಗಳು ತಲಾ 4 ಹಾಗೂ 2 ಲಿವರ್‌ಗಳನ್ನು ಆಸ್ಪತ್ರೆಯ ವೈದ್ಯರು ಅಗತ್ಯ ಇದ್ದವರಿಗೆ ಅಳವಡಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಹುಣಸೂರಿನ ಲಾರೆನ್ಸ್ (40) ಅವರ ಒಂದು ಮೂತ್ರಪಿಂಡ, ಒಂದು ಲಿವರ್‌ ಅನ್ನು ಆಸ್ಪತ್ರೆಯಲ್ಲಿ ಅಗತ್ಯ ಇದ್ದವರಿಗೆ ಅಳವಡಿಸಲಾಯಿತು. ಒಂದು ಮೂತ್ರಪಿಂಡವನ್ನು ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆ ಹಾಗೂ ಒಂದು ಹೃದಯದ ವಾಲ್ವ್‌ ಅನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ದಾನ ಮಾಡಲಾಗಿದೆ.

ಬ್ರೇನ್ ಹೆಮಾರೈಜ್‌ಗೆ ಒಳಗಾಗಿದ್ದ ಕುಶಾಲನಗರದ ಶೋಭಾ (48) ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇವರ ಒಂದು ಮೂತ್ರಪಿಂಡ ಹಾಗೂ ಲಿವರ್‌ ಅನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ, ಒಂದು ಮೂತ್ರಪಿಂಡವನ್ನು ಜೆಎಸ್‌ಎಸ್‌ ಆಸ್ಪತ್ರೆಗೆ, ಒಂದು ಹೃದಯದ ವಾಲ್ವ್‌ ಅನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೂ ನೀಡಲಾಗಿದೆ. ಇಬ್ಬರ ಕಾರ್ನಿಯಾಗಳನ್ನು ಮೈಸೂರಿನ ನೇತ್ರ ಬ್ಯಾಂಕಿಗೆ ನೀಡಲಾಗಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ್‌ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT