ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ತನಿಖೆ; ಮತ್ತಿಬ್ಬರ ಬಂಧನ

Last Updated 21 ಏಪ್ರಿಲ್ 2021, 5:17 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಯಲಿಗೆಳೆದ ನಕಲಿ ರೆಮ್‌ಡಿಸಿವಿರ್ ಮಾರಾಟ ಪ್ರಕರಣದ ಕರಿನೆರಳು ಹೊರರಾಜ್ಯಕ್ಕೂ ಚಾಚಿಕೊಂಡಿರುವುದು ಪತ್ತೆಯಾಗಿದೆ. ಆಂಧ್ರಪ್ರದೇಶದಿಂದಲೂ ನಕಲಿ ರೆಮ್‌ಡಿಸಿವಿರ್‌ ಖರೀದಿಸಿರುವ ಅಂಶ ಗೊತ್ತಾಗಿದೆ.

ಪ್ರಕರಣ ಸಂಬಂಧ ಮಂಗಳವಾರ ಮಂಜುನಾಥ್ ಮತ್ತು ಪ್ರಶಾಂತ್ ಎಂಬುವವರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 3ಕ್ಕೇರಿದೆ.

‘ಸೋಮವಾರ ಬಂಧನಕ್ಕೆ ಒಳಗಾಗಿದ್ದ ಗಿರೀಶ್‌, ತಾನು ತಯಾರಿಸುತ್ತಿದ್ದ ನಕಲಿ ರೆಮ್‌ಡಿಸಿವಿರ್‌ಅನ್ನು ಔಷಧ ಕಂಪನಿಗಳ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಮತ್ತು ಪ್ರಶಾಂತ್ ಎಂಬುವವರ ಮೂಲಕ ಮಾರಾಟ ಮಾಡುತ್ತಿದ್ದ. ಈಗ ಇವರು, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ವಿವರಗಳನ್ನು ತನಿಖಾ ತಂಡಕ್ಕೆ ನೀಡಿದ್ದಾರೆ. ಮೈಸೂರು, ಬೆಂಗಳೂರು ಮಾತ್ರವಲ್ಲದೇ; ಆಂಧ್ರಪ್ರದೇಶಕ್ಕೂ ಮಾರಾಟ ಮಾಡಿರುವ ಅಂಶ ಗೊತ್ತಾಗಿದೆ. ಇವರಿಂದ ನಕಲಿ ರೆಮ್‌ಡಿಸಿವರ್‌ ಖರೀದಿಸಿದವರ ವಿವರ ಕಲೆ ಹಾಕಲಾಗುತ್ತಿದೆ. ಸುಮಾರು 800 ಮಂದಿಗೆ ನಕಲಿ ರೆಮ್‌ಡಿಸಿವಿರ್ ನೀಡಲಾಗಿದ್ದು, ಇವುಗಳನ್ನು ಪಡೆದ ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ರೆಮ್‌ಡಿಸಿವಿರ್‌ ಖಾಲಿ ಬಾಟಲಿಗಳನ್ನು ಪೂರೈಸುತ್ತಿದ್ದ ಆರೋಪಿಗಳಾದ ಶಿವಪ್ಪ ಹಾಗೂ ಮಂಗಳಾ ಅವರ ವಿಚಾರಣೆ ತೀವ್ರಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT