ಶನಿವಾರ, ಜುಲೈ 24, 2021
28 °C

ವಿ.ವಿ: ಏಕರೂಪ ಪಠ್ಯಕ್ರಮಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎಲ್ಲ ವಿಶ್ವವಿದ್ಯಾಲಯಗಳಿಗೂ ಏಕರೂಪದ ಪಠ್ಯಕ್ರಮ ರೂಪಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ವಿಶ್ರಾಂತ ಕುಲಪತಿಗಳ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

‘ಈ ಕ್ರಮದಿಂದ ವಿಶ್ವವಿದ್ಯಾಲಯಗಳ ವೈವಿಧ್ಯತೆ ನಾಶವಾಗುತ್ತದೆ. ಸ್ವಾಯತ್ತೆಗೆ ಕೊಡಲಿಪೆಟ್ಟು ಬೀಳುತ್ತದೆ’ ಎಂದು ವೇದಿಕೆಯ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ವಿಶ್ರಾಂತ ಕುಲಪತಿ ಎನ್‌.ಎಸ್‌.ರಾಮೇಗೌಡ ಮಾತನಾಡಿ, ‘ಮೈಸೂರು ವಿಶ್ವವಿದ್ಯಾಲಯದಲ್ಲಿರುವ ‘ಥಿಯರೆಟಿಕಲ್ ಫಿಸಿಕ್ಸ್’ ಬೇರೆ ವಿಶ್ವವಿದ್ಯಾಲಯಗಳಲ್ಲಿಲ್ಲ. ಇದೇ ರೀತಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ಇರುವ ವಿಶಿಷ್ಟ ಬಗೆಯ ಕೋರ್ಸ್‌ಗಳು ಇಲ್ಲಿಲ್ಲ. ಬೋಧನೆಯಲ್ಲಿ ಏಕರೂಪ ಇಲ್ಲದ ಮೇಲೆ ಪಠ್ಯಕ್ರಮದಲ್ಲಿ ಏಕರೂಪ ತರುವ ಚಿಂತನೆಯೇ ಸರಿಯಲ್ಲ' ಎಂದರು.

ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀನ್, ‘ಆನ್‌ಲೈನ್‌ ಶಿಕ್ಷಣ ನೀಡಲೂ ವಿಶ್ವವಿದ್ಯಾಲಯಗಳು ಸಿದ್ಧತೆ ಮಾಡಿಕೊಂಡಿಲ್ಲ. ವಿಜ್ಞಾನದಂತಹ ವಿಷಯಗಳ ಬೋಧನೆ ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ. ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿರುವ ಅಧ್ಯಾಪಕ ವೃಂದ ಆನ್‌ಲೈನ್‌ ಶಿಕ್ಷಣ ಪಡೆದಿಲ್ಲ’ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ನಡುವೆ ಸಿಬ್ಬಂದಿ ವರ್ಗಾವಣೆಗಾಗಿ ಸರ್ಕಾರ ಈ ರೀತಿ ಮಾಡಿರಬಹುದು ಎಂದು ವಿಶ್ರಾಂತ ಕುಲಪತಿ ವೆಂಕಟರಾಮ್ ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು