ಸೋಮವಾರ, ಆಗಸ್ಟ್ 8, 2022
24 °C

ಕೋವಿಡ್ ಸಾವಿನಲ್ಲಿ ವ್ಯತ್ಯಾಸ, ಅಂಕಿಅಂಶ ಮರುಸಂಗ್ರಹ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸಾವಿನ ವ್ಯತ್ಯಾಸ ಸಂಬಂಧ ಅಂಕಿಅಂಶಗಳನ್ನು ಮರುಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಮೈಸೂರು ನಗರದಲ್ಲಿ ಕೋವಿಡ್ ಸಾವುಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ,  'ಈ ವಿಚಾರದ ಬಗ್ಗೆ ಸದ್ಯಕ್ಕೆ ನನ್ನ ಬಳಿ ಉತ್ತರವಿಲ್ಲ. ಅಂಕಿ ಅಂಶ ಕಲೆಹಾಕುವ ಕಾರ್ಯ ಪೂರ್ಣಗೊಂಡಿಲ್ಲ. ಮಾಹಿತಿ ಸಿಕ್ಕ ನಂತರ ವಾಸ್ತವ ಗೊತ್ತಾಗಲಿದೆ' ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಮಾತನಾಡಿ, 'ಜಿಲ್ಲಾಧಿಕಾರಿ ಹೊಸದಾಗಿ ಬಂದಿದ್ದಾರೆ. ಯಾವುದೇ ವಿಚಾರವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸಾವಿನ ವಿಚಾರವಿರಲಿ, ಯಾವುದೇ ಇರಲಿ ಎಲ್ಲವನ್ನೂ ತಿಳಿಸುತ್ತೇವೆ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು