ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆಗೆ ಸಿದ್ಧತೆ: 4,274 ವಿವಿ ಪ್ಯಾಟ್‌ಗಳು ಮೈಸೂರಿಗೆ ರವಾನೆ

Last Updated 13 ಫೆಬ್ರುವರಿ 2023, 13:06 IST
ಅಕ್ಷರ ಗಾತ್ರ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಚುನಾವಣಾ ಆಯೋಗದಿಂದ 4,274 ವಿವಿಪ್ಯಾಟ್‌ ಯಂತ್ರಗಳು ಹಂಚಿಕೆಯಾಗಿದ್ದು, ಅವುಗಳನ್ನು ಹೈದರಾಬಾದ್‌ನಿಂದ ತರಿಸಲಾಗುತ್ತಿದೆ.

‘ಆ ಯಂತ್ರಗಳನ್ನು ಹೈದರಾಬಾದ್‌ನಲ್ಲಿ ಪ್ಯಾಕಿಂಗ್ ಮಾಡಿ ಸಾಗಿಸುವ ಕಾರ್ಯ ಸೋಮವಾರ ನಡೆದಿದೆ. ಅಲ್ಲಿಂದ ಹೊರಡುವ ವಾಹನವು 20 ಗಂಟೆಗಳಲ್ಲಿ ಇಲ್ಲಿಗೆ ಬಂದು ತಲುಪಲಿದೆ. ಅವುಗಳನ್ನು ಸಂಗ್ರಹಿಡಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿದ್ದಾರ್ಥನಗರದಲ್ಲಿ ನಿರ್ಮಿಸಿರುವ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗುವುದು’ ಎಂದು ಜಿಲ್ಲಾಡಳಿತದ ಮೂಲಗಳು ಮಾಹಿತಿ ನೀಡಿವೆ.

5,635 ಬ್ಯಾಲೆಟ್ ಯುನಿಟ್‌ಗಳು ಹಾಗೂ 3,958 ಕಂಟ್ರೋಲ್ ಯುನಿಟ್‌ಗಳನ್ನು ಹೋದ ವರ್ಷದ ನವೆಂಬರ್‌ನಲ್ಲಿ ಹೈದರಾಬಾದ್‌ನಿಂದಲೇ ತರಿಸಲಾಗಿದೆ. ಅವುಗಳನ್ನು ಕೂಡ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT