ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅನ್ನಭಾಗ್ಯ: 6.48 ಲಕ್ಷ ಮಂದಿಗೆ ₹ 31 ಕೋಟಿ

Published 13 ಜುಲೈ 2023, 2:47 IST
Last Updated 13 ಜುಲೈ 2023, 2:47 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ (ಪಿಎಚ್‌ಎಚ್‌) ‘ಅನ್ನಭಾಗ್ಯ’ ಯೋಜನೆಯಲ್ಲಿ ಬುಧವಾರ ಮಧ್ಯಾಹ್ನದವರೆಗೆ 6.48 ಲಕ್ಷ ಫಲಾನುಭವಿಗಳಿಗೆ ₹ 31 ಕೋಟಿ ಜಮೆಯಾಗಿದೆ.

ಫಲಾನುಭವಿಗಳಿಗೆ ಸದ್ಯಕ್ಕೆ 5 ಕೆ.ಜಿ. ಅಕ್ಕಿ ಹಾಗೂ ಉಳಿದ ಐದು ಕೆ.ಜಿ.ಗೆ ತಗಲುವಷ್ಟು ಹಣವನ್ನು (ಪ್ರತಿ ಕೆ.ಜಿ.ಗೆ 34ರಂತೆ ಒಟ್ಟು ₹ 170) ಡಿಬಿಟಿ ಮೂಲಕ ಜಮಾ ಮಾಡಲಾಗುತ್ತಿದೆ.

‘ಜಿಲ್ಲೆಯಲ್ಲಿ 50,432 ಎಎವೈ ಚೀಟಿಗಳಿದ್ದು, 2,17,199 ಸದಸ್ಯರಿದ್ದಾರೆ ಹಾಗೂ 6,61,290 ಪಿಎಚ್‌ಎಚ್‌ ಚೀಟಿಗಳಿದ್ದು, 20,83,627 ಸದಸ್ಯರಿದ್ದಾರೆ. ಒಟ್ಟು 23 ಲಕ್ಷ ಫಲಾನುಭವಿಗಳಾಗುತ್ತಾರೆ. ಇವರಲ್ಲಿ 63,307 ಚೀಟಿದಾರರು ಈ ತಿಂಗಳಲ್ಲಿ ಹಣ ಪಡೆಯಲು ಅರ್ಹರಾಗಿಲ್ಲ. ಇವರಲ್ಲಿ 17,068 ಚೀಟಿಗಳಿಗೆ ಸಂಬಂಧಿಸಿದಂತೆ ಕುಟುಂಬದ ಯಜಮಾನರ ಬ್ಯಾಂಕ್‌ ಖಾತೆ ಸಕ್ರಿಯವಾಗಿಲ್ಲ ಹಾಗೂ 46,239 ಮಂದಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿಲ್ಲ ಅಥವಾ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಅವರು ಮಾನದಂಡದ ಪ್ರಕಾರ ದಾಖಲೆ ಸಲ್ಲಿಸಿದರೆ ಮುಂದಿನ ತಿಂಗಳಿಂದ ಹಣ ಪಡೆಯಲಿದ್ದಾರೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಕುಮುದಾ ಶರತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT