ಪಿರಿಯಾಪಟ್ಟಣ: ಮೀಟರ್ ರೀಡರ್ಗಳು ಗೃಹ ಜ್ಯೋತಿ ಯೋಜನೆಯಲ್ಲಿ ಬಳಕೆ ಮಾಡಿದ ವಿದ್ಯುತ್ ಯೂನಿಟ್ಗಳನ್ನು ತಪ್ಪು ಲೆಕ್ಕ ಮಾಡಿ ರೈತರಿಗೆ ಅಧಿಕ ಬಿಲ್ ಪಾವಿಸುವಂತೆ ಬಿಲ್ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಮಿಷನ್ ಆಸೆಗಾಗಿ ಮೀಟರ್ ರೀಡರ್ ಗೃಹಜೋತಿ ಯೋಜನೆಯಲ್ಲಿ ಬಳಕೆ ಮಾಡುತ್ತಿರುವ ಯುನಿಟ್ ಗಳ ಲೆಕ್ಕಾಚಾರವನ್ನು ಸರಿಯಾಗಿ ಮಾಡದೆ ರೈತರಿಗೆ ಅಧಿಕ ಪಾವತಿಸುವಂತೆ ವಿದ್ಯುತ್ ಬಿಲ್ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ಗ್ರಾಮದಲ್ಲಿನ ಪ್ರಗತಿಪರ ಕೃಷಿಕ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಆನಂದ್ ಎಂಬುವರ ಮನೆಯ ವಿದ್ಯುತ್ ಸಂಪರ್ಕದ ಮೀಟರ್ ರೀಡ್ ಮಾಡುವ ಸಂದರ್ಭದಲ್ಲಿ ಪ್ರತಿ ತಿಂಗಳು ಮೀಟರ್ ರೀಡ್ ಮಾಡುವಾಗ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ ಎಂದು ಮೀಟರ್ ರೀಡ್ ಮಾಡಿ ಮೂರು ತಿಂಗಳ ಅಧಿಕ ವಿದ್ಯುತ್ ಬಳಕೆ ಮಾಡಿದ್ದಾರೆ ಎಂದು ತಪ್ಪು ಲೆಕ್ಕಾಚಾರ ಹಾಕಿ ಎರಡು ತಿಂಗಳ ಲೆಕ್ಕಾಚಾರಕ್ಕೆ ಗೃಹಜೋತಿ ಯೋಜನೆಯ ಲಾಭ ಪಡೆದುಕೊಳ್ಳದಂತೆ ತಪ್ಪಿಸಿರುವುದಲ್ಲದೆ ಮೂರನೇ ತಿಂಗಳು ಅಧಿಕ ಶುಲ್ಕ ಪಾವತಿ ಮಾಡುವಂತೆ ಮೀಟರ್ ವಿದ್ಯುತ್ ಬಿಲ್ ನೀಡಲಾಗಿದೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಪರಿಶೀಲಿಸಿದ ನಂತರ ಮೀಟರ್ ರೀಡರ್ ಶಿವಮೂರ್ತಿಯವರು ರೈತರಿಗೆ ಗೃಹ ಜ್ಯೋತಿ ಯೋಜನೆಯ ಸಂಪೂರ್ಣ ಲಾಭ ಪಡೆಯದಂತೆ ಮಾಡಿರುವುದು ಬೆಳಕಿಗೆ ಬಂದಿದೆ.

ಹೇಳಿಕೆಗಳು:

ನನಗೆ 2 ರಿಂದ 3 ಸಾವಿರ ನಷ್ಟವಾಗಿದೆ ಇದೇ ರೀತಿ ತಪ್ಪು ಲೆಕ್ಕಾಚಾರ ಹಾಕಿರುವುದರಿಂದ ನಮ್ಮ ಗ್ರಾಮದ ರೈತರಾದ ಟಿ. ಸಿ.ರಾಮಚಂದ್ರ ಸೇರಿದಂತೆ ಹಲವು ರೈತರಿಗೆ ಇದೇ ರೀತಿ ಅನ್ಯಾಯವಾಗಿದೆ ನಿಗದಿತ ಸಂಬಳದ ಜೊತೆಗೆ ಹೆಚ್ಚು ವಿದ್ಯು ಶುಲ್ಕ ವಸೂಲಿ ಮಾಡಿದರೆ ಅದಕ್ಕೆ ಕಮಿಷನ್ ನೀಡುತ್ತಾರೆ ಅದಕ್ಕಾಗಿ ಈ ರೀತಿ ಅಧಿಕ ಶುಲ್ಕ ಬರುವಂತೆ ಮಾಡಲಾಗುತ್ತಿದೆ ಎನ್ನುತ್ತಾರೆ ಟಿ.ಜೆ. ಆನಂದ್.

ಲೋಪ ದೋಷವಾಗಿರುವ ಬಗ್ಗೆ ರೈತರು ನಮ್ಮ ಗಮನಕ್ಕೆ ತಂದಿದ್ದಾರೆ ವಿದ್ಯುತ್ ಬಿಲ್ ಗಳನ್ನು ತಂದು ಹಾಜರುಪಡಿಸುವಂತೆ ಸೂಚಿಸಿದ್ದೇವೆ ಲೋಪದೋಷವಾಗಿರುವುದು ಕಂಡು ಬಂದರೆ ಮೀಟರ್ ರೀಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ರವಿ ಸೆಸ್ಕ್ ಜೆಇ

ಸರ್ಕಾರದ ಗ್ಯಾರೆಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸಬೇಕು ಎಂದು ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದು ಸೂಕ್ತ ಎಚ್ಚರಿಕೆ ಮತ್ತು ತಿಳುವಳಿಕೆ ನೀಡಲಾಗುತ್ತಿದೆ ಆದರೂ ಈ ರೀತಿಯ ಲೋಕದೋಷವಾಗುತ್ತಿರುವುದನ್ನು ಕಂಡು ಬಂದರೆ ಅಂತ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು.

ನಿತಿನ್ ವೆಂಕಟೇಶ್ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.