ಮೈಸೂರು: ‘ಪರಮಾತ್ಮನೊಂದಿಗೆ ಮಾತನಾಡುವ ಭಾಷೆ ಉತ್ಕೃಷ್ಟವಾಗಿರಬೇಕು. ಆದಿ ಶಂಕರಾಚಾರ್ಯರು ಸ್ತೋತ್ರಗಳನ್ನು ರಚಿಸುವ ಮೂಲಕ ದೇವರೊಂದಿಗೆ ಮಾತನಾಡುವ ಭಾಷೆ ನೀಡಿದ್ದಾರೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ನಗರದ ಅಂಬಾವಿಲಾಸ ಅರಮನೆ ಆವರಣದಲ್ಲಿ ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಸ್ತುತಿ ಶಂಕರ’ ಸ್ತೋತ್ರ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲೋಕದಲ್ಲಿ ಅನೇಕ ಭಾಷೆಗಳಿರುವಂತೆಯೇ, ಒಬ್ಬೊಬ್ಬರಲ್ಲೂ ಭಾಷೆಯ ವಿಭಿನ್ನ ಶೈಲಿ ಹಾಗೂ ಶಬ್ದಜಾಲವಿದೆ. ನಾವು ಮಾತನಾಡುವ ಬಗೆಯಿಂದ ಲೋಕದಲ್ಲಿ ಕಾರ್ಯಗಳು ಆಗುತ್ತವೆ. ಹೀಗಾಗಿ, ಪರಮಾತ್ಮನಿಂದ ಏನನ್ನು ಪಡೆದುಕೊಳ್ಳಬೇಕು ಶಂಕರರು ಸ್ತೋತ್ರಗಳಲ್ಲಿ ಹೇಳಿದ್ದಾರೆ. ಲಕ್ಷ್ಮಿನೃಸಿಂಹಕರುಣಾರಸಸ್ತೋತ್ರದಲ್ಲಿ ಸಂಸಾರ ಜೀವನದ ಬಗ್ಗೆಯೇ ಹೆಚ್ಚು ಪ್ರಸ್ತಾಪವಿದೆ’ ಎಂದು ಉದಾಹರಿಸಿದರು.

ಮಹಾಸಮರ್ಪಣೆ:

‘ಸ್ತೋತ್ರ ಪಠಿಸಿ ಎಲ್ಲರೂ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಕಲ್ಯಾಣವೃಷ್ಟಿ ಮಹಾಭಿಯಾನವನ್ನು ವರ್ಷದಿಂದ ನಡೆಸಲಾಗಿತ್ತು. ಅದರ ಮಹಾಸಮರ್ಪಣೆಯು ಅರಮನೆ ಆವರಣದಲ್ಲಿ ನಡೆದಿರುವುದು, ಪಾರಾಯಣದಲ್ಲಿ ಸಹಸ್ರಾರು ಮಂದಿ ಏಕಕಂಠದಲ್ಲಿ ಪಠಣ ಮಾಡಿರುವುದು ಸಂತಸ ತಂದಿದೆ’ ಎಂದು ಪ್ರಶಂಸಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಶೃಂಗೇರಿ ಮಠ, ಅರಮನೆಗೂ ಅವಿನಾಭಾವ ಸಂಬಂಧ ಇದೆ. ನಮ್ಮ ಪೂರ್ವಜರು ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡೆದಿದ್ದಾರೆ. ಸಂಕಷ್ಟ ಬಂದಾಗಲೆಲ್ಲ ಶೃಂಗೇರಿ ಮಠ ನೆನೆಪಿಸಿಕೊಳ್ಳುತ್ತೇವೆ. ಧರ್ಮ, ಸಂಸ್ಕೃತಿಯ ರಕ್ಷಣೆಯಲ್ಲಿ ನಿತ್ಯ ಸೇವೆ ಮಾಡುತ್ತಿರುವ ಮಠದ ಕಾರ್ಯ ಹಿರಿದಾಗಿದೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ‘ಸ್ತುತಿ ಶಂಕರ ಕಾರ್ಯಕ್ರಮವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಅಧ್ಯಾತ್ಮದ ಜಾಗೃತಿಯಾಗಿದೆ. ಸಾಂಸ್ಕೃತಿಕ ಪುನರುತ್ಥಾನವಾಗಿದ್ದು, ಭಾರತೀಯ ಧಾರ್ಮಿಕ ಪರಂಪರೆಯ ಸಂಭ್ರಮವಾಗಿದೆ’ ಎಂದು ಹೇಳಿದರು.

ಇದಕ್ಕೂ ಮೊದಲು, ಅರಮನೆಯಲ್ಲಿ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಬರಮಾಡಿಕೊಂಡ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ್, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ಅವರು ಪಾದುಕೆ ಪೂಜೆ ನೆರವೇರಿಸಿದರು.

ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಪಾಲ್ಗೊಂಡಿದ್ದರು.

‘ತ್ರಿನೇಶ್ವರ ದೇಗುಲದಲ್ಲಿ ಶಂಕರರು ತಂಗಿದ್ದರು’

ಕೃಷ್ಣರಾಜನಗರದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ ಮಾತನಾಡಿ ‘ಸ್ತೋತ್ರ ಪಠಣ ಧ್ಯಾನ ಮಾಡುವುದರಿಂದ ಮನೋಬಲ ಹೆಚ್ಚುತ್ತದೆ. ಅರಮನೆಯ ತ್ರಿನೇಶ್ವರ ದೇವಸ್ಥಾನದಲ್ಲಿ ಆದಿ ಶಂಕರಾಚಾರ್ಯರು 1200 ವರ್ಷದ ಹಿಂದೆ ತಂಗಿದ್ದರು. ಇಲ್ಲಿಯೇ ಪ್ರಶ್ನೋತ್ತರ ರತ್ನಮಾಲಿಕಾ ಬರೆದಿದ್ದರೆಂಬ ಐತಿಹ್ಯವಿದೆ. ಇಂಥ ಪವಿತ್ರ ಜಾಗದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಶಂಕರರ ಇಚ್ಛೆ’ ಎಂದು ಸ್ಮರಿಸಿದರು. ‘ಹಣೆಬರಹ ಬದಲಿಸಲಾಗದು ಎಂಬುದು ಮನುಷ್ಯನ ಚಿಂತೆಯಾಗಿದೆ. ಶಂಕರರು ಹಣೆಬರಹವನ್ನು ನಾವೇ ತಿದ್ದಿಕೊಳ್ಳಬೇಕೆಂದು ಹೇಳಿದರು. ತಿದ್ದಿಕೊಳ್ಳುವುದು ಗೊತ್ತಿಲ್ಲವಾದರೆ ತೊಳಲಾಟದಲ್ಲಿ ಇರಬೇಕಾಗುತ್ತದೆ. ಶಂಕರರ ಸ್ತೋತ್ರಗಳಿಗೆ ನಮ್ಮ ಹಣೆಬರಹವನ್ನು ಸರಿ ಮಾಡುವ ಶಕ್ತಿ ಇದೆ. ಸಮಾಜದ ಎಲ್ಲರನ್ನೂ ಸರಿದಾರಿಯಲ್ಲಿ ನಡೆಸುತ್ತವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.