ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಕೊಲೆ ಪ್ರಕರಣ: ಮೈಸೂರಿನಲ್ಲಿ ಆರೋಪಿ ಮಹಜರು

Published 31 ಮೇ 2024, 6:22 IST
Last Updated 31 ಮೇ 2024, 6:22 IST
ಅಕ್ಷರ ಗಾತ್ರ

ಮೈಸೂರು: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಸಂಗ್ರಹಣೆಗಾಗಿ ಸಿಐಡಿ ಅಧಿಕಾರಿಗಳು ಗುರುವಾರ ಆರೋಪಿ ಗಿರೀಶ ಸಾವಂತನನ್ನು ಮೈಸೂರಿಗೆ ಕರೆ ತಂದರು.

ಆರೋಪಿಯನ್ನು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಜ ಹೋಟೆಲ್‌ಗೆ ಕರೆತಂದು ಮಹಜರು ನಡೆಸಿದರು. ಆತನ ಜೊತೆಗೆ ಕೆಲಸ ಮಾಡುತ್ತಿದ್ದವರೊಂದಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಹೋಟೆಲ್‌ನಲ್ಲಿ ಆರೋಪಿಯ ವರ್ತನೆ ಹೇಗಿತ್ತು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

‘ಆತ ನಾಲ್ಕು ತಿಂಗಳು ಸಪ್ಲೈಯರ್‌ ಆಗಿ ಕೆಲಸ ಮಾಡಿದ್ದ. ಕೊಲೆಯಾದ ಹಿಂದಿನ ದಿನ ₹5 ಸಾವಿರ ಮುಂಗಡ ಹಣ ಪಡೆದು ಸಂಜೆ ಸಮಾರು 4.30ಕ್ಕೆ ಯಾರಿಗೂ ಹೇಳದೆ ಹುಬ್ಬಳ್ಳಿಗೆ ಹೊರಟು ಹೋಗಿದ್ದ. ಪೊಲೀಸರ ವಿಚಾರಣೆ ಸಮಯದಲ್ಲಿ ಅಗತ್ಯ ಮಾಹಿತಿ ನೀಡಿದ್ದೇವೆ’ ಎಂದು ಹೋಟೆಲ್‌ ಮಾಲೀಕ ಗೋವರ್ಧನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT