ಮೈಸೂರು: ಮೈಸೂರಿಗೆ ಇನ್ನೆರಡು ವಿಶೇಷ ವಿದ್ಯುತ್ ರೈಲು (ಮೆಮು) ಸಿಗುತ್ತಿವೆ. ಹಾಲಿ ಸಂಚರಿಸುತ್ತಿರುವ ಎರಡು ಪ್ಯಾಸೆಂಜರ್ ರೈಲುಗಳನ್ನು ಮೇಲ್ದರ್ಜೆಗೆ ಏರಿಸಿ ‘ಮೆಮು’ ರೈಲುಗಳನ್ನಾಗಿ ಪರಿವರ್ತಿಸುವಂತೆ ನೈರುತ್ಯ ರೈಲ್ವೆ ಬೆಂಗಳೂರು ವಲಯ ಕಚೇರಿ ಪ್ರಸ್ತಾವ ಸಲ್ಲಿಸಿದೆ.

ಹಾಲಿ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲುಗಳು (ಸಂಖ್ಯೆ 56237/38 ಮತ್ತು 56231/32) ಬೆಳಿಗ್ಗೆ ಹಾಗೂ ರಾತ್ರಿ ಹೊತ್ತಿನಲ್ಲಿ ಮೈಸೂರು – ಬೆಂಗಳೂರು ನಡುವೆ ಸಂಚರಿಸುತ್ತಿವೆ. ರೈಲು ಸಂಖ್ಯೆ 56237/38 ಮಧ್ಯಾಹ್ನ 3ಕ್ಕೆ ಮೈಸೂರು ಬಿಟ್ಟು, ಸಂಜೆ 6.15ಕ್ಕೆ ಬೆಂಗಳುರು ಸೇರುತ್ತಿದೆ. ಬೆಂಗಳೂರಿನಿಂದ ಸಂಜೆ 7ಕ್ಕೆ ಬಿಟ್ಟು, ರಾತ್ರಿ 10.20ಕ್ಕೆ ಮೈಸೂರಿಗೆ ಬರುತ್ತಿದೆ.

ಅಂತೆಯೇ, ರೈಲು ಸಂಖ್ಯೆ 56231/32 ಮೈಸೂರಿನಿಂದ ಬೆಳಿಗ್ಗೆ 6.10ಕ್ಕೆ ಹೊರಟು, ಬೆಂಗಳೂರಿಗೆ ಬೆಳಿಗ್ಗೆ 9.15ಕ್ಕೆ ತಲುಪುತ್ತಿದೆ. ಬೆಂಗಳೂರಿನಿಂದ ಬೆಳಿಗ್ಗೆ 9.20ಕ್ಕೆ ಹೊರಟು, ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ಬರುತ್ತಿದೆ. ಈ ಎರಡೂ ರೈಲುಗಳು ಸಾಂಪ್ರದಾಯಿಕ ಡೀಸೆಲ್ ಎಂಜಿನ್‌ಗಳನ್ನು ಕಳೆದುಕೊಂಡು ವಿದ್ಯುತ್ ರೈಲುಗಳಾಗಿ ಪರಿವರ್ತನೆಯಾಗಲಿವೆ.

ಸಂಚಾರ ಸಮಯದಲ್ಲಿ ಬದಲು: ಈ ಎರಡೂ ಪ್ಯಾಸೆಂಜರ್ ರೈಲುಗಳು ‘ಮೆಮು’ವಾಗಿ ಪರಿವರ್ತನೆಗೊಂಡ ಬಳಿಕ ಸಂಚಾರ ಸಮಯದಲ್ಲಿ ಬದಲಾವಣೆ ಆಗಲಿದೆ. 56231/32 ರೈಲು ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 9ಕ್ಕೆ ಬೆಂಗಳೂರು ತಲುಪಲಿದೆ. ಅಂತೆಯೇ, ಬೆಳಿಗ್ಗೆ 9.10ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 12.30ಕ್ಕೆ ಮೈಸೂರು ಸೇರಲಿದೆ. ಅಂತೆಯೇ, 56237/38 ರೈಲು ಮಧ್ಯಾಹ್ನ 1.45ಕ್ಕೆ ಮೈಸೂರು ಬಿಟ್ಟು, ಸಂಜೆ 5ಕ್ಕೆ ಬೆಂಗಳೂರು ತಲುಪಲಿದೆ. ಸಂಜೆ 7ಕ್ಕೆ ಬೆಂಗಳೂರು ಬಿಟ್ಟು, ರಾತ್ರಿ 11ಕ್ಕೆ ಮೈಸೂರು ತಲುಪಲಿದೆ.

ದರದಲ್ಲಿ ಬದಲಾವಣೆಯಿಲ್ಲ: ರೈಲುಗಳ ಮೇಲ್ದರ್ಜೆಯಿಂದ ದರ ಬದಲಾವಣೆಯೇನೂ ಆಗುತ್ತಿಲ್ಲ. ಪ್ಯಾಸೆಂಜರ್ ರೈಲುಗಳಿಗೆ ಮೈಸೂರು– ಬೆಂಗಳೂರು ನಡುವೆ ಹಾಲಿ ₹ 30 ಟಿಕೆಟ್ ದರವಿದೆ. ‘ಮೆಮು’ ರೈಲಿನ ಟಿಕೆಟ್ ದರವೂ ₹ 30 ಇದೆ. ವಿದ್ಯುತ್ ರೈಲಾಗಿ ಮೇಲ್ದರ್ಜೆಗೆ ಏರಿದರೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ನೈರುತ್ಯ ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

2018ರ ಡಿ. 26ರಿಂದ ಒಂದು ‘ಮೆಮು’ ರೈಲು (ಸಂಖ್ಯೆ 06575/76) ಮೈಸೂರು – ಬೆಂಗಳೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.